ಟಿಕೆಟ್ ಕೇಳಿದ್ದಕ್ಕೆ ಹಲ್ಲೆ ನಡೆಸಿದ ನಿರ್ವಾಹಕ

ಭಾನುವಾರ, 2 ಆಗಸ್ಟ್ 2015 (13:58 IST)
ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ಗಳು ಮತ್ತು ಪ್ರಯಾಣಿಕರ ಮಧ್ಯೆ ನಡೆಯುತ್ತಿರುವ ಜಟಾಪಟಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಟಿಕೆಟ್ ನೀಡಿ ಎಂದ ಪ್ರಯಾಣಿಕರೊಬ್ಬರ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಘಟನೆ ನಗರದ ಯಲಹಂಕ ಬಳಿ ನಡೆದಿದೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು ಪೀಡಿತರು ಪ್ರಕರಣವನ್ನು ದಾಖಲಿಸದ ಕಾರಣಕ್ಕೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಮೆಜೆಸ್ಟಿಕ್-ಯಲಹಂಕ ಮಾರ್ಗದ ಕೆಎ -01, ಎಫ್-1898 ನಂಬರ್‌ನ ಬಿಎಂಟಿಸಿ ಬಸ್‌ನಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದೆ. ಟಿಕೆಟ್ ನೀಡಿರೆಂದು ಕೇಳಿದ ಪ್ರಯಾಣಿಕರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಕೆಟ್ಟ ಶಬ್ಧಗಳಿಂದ ಬೈಯ್ಯಲು ಪ್ರಾರಂಭಿಸಿದ ನಿರ್ವಾಹಕ ನಂತರ ಏಕಾಏಕಿ ಹಲ್ಲೆ ನಡೆಸಿದ್ದಾನೆಂದು ತಿಳಿದು ಬಂದಿದೆ. 
 
ಆದರೆ ಹಲ್ಲೆಗೊಳಗಾಗದವರು ಪೊಲೀಸ್ ಠಾಣೆಯಲ್ಲಿ ದೂರು ನೀಡದಿದ್ದುದರಿಂದ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. 
 
ನಡೆದ ಘಟನೆಯನ್ನು ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು ನಿರ್ವಾಹಕನ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ