ವಿಟಮಿನ್ ಮಾತ್ರೆ ಬದಲಿಗೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಮಕ್ಕಳು ಅಸ್ವಸ್ಥ

ಬುಧವಾರ, 23 ಜುಲೈ 2014 (17:08 IST)
ಅಂಗನವಾಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಟಮಿನ್ ಎ ಮಾತ್ರೆ ಬದಲು ಕ್ರಿಮಿನಾಶಕ ಮಾತ್ರ ವಿತರಣೆ ಮಾಡಿದ ಘಟನೆ ಧಾರವಾಡದ ಅಳ್ನಾವರದಲ್ಲಿ ನಡೆದಿದೆ. 
ಕಿರಿಯ ಆರೋಗ್ಯ ಸಹಾಯಕಿ ಸುನಂದಾ ಇಂದು ಅಂಗನವಾಡಿಗೆ ಭೇಟಿ ನೀಡಿ ಕ್ರಿಮಿನಾಶಕ ಮಾತ್ರೆಗಳನ್ನು ವಿತರಣೆ ಮಾಡಿದರು.  

ಕ್ರಿಮಿನಾಶಕ ಮಾತ್ರೆ ಸೇವಿಸಿದ ವಿದ್ಯಾರ್ಥಿಗಳು ವಾಂದಿ, ಭೇದಿಯಿಂದ ನರಳುತ್ತಿದ್ದಾರೆ.  ಅಸ್ವಸ್ಥ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಪ್ರತಿ ನಿತ್ಯ ವಿಟಮಿನ್ ಎ ಮಾತ್ರೆಯನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಮಕ್ಕಳನ್ನು ಆರೋಗ್ಯವಂತರಾಗಿ ಇಡಲು ವಿಟಮಿನ್ ಎ ಮಾತ್ರೆಗಳನ್ನು ನೀಡುವ ವಾಡಿಕೆಯಿತ್ತು.

ಆದರೆ ವಿಟಮಿನ್ ಮಾತ್ರೆ ಬದಲಿಗೆ ಜಂತುಹುಳು ಮಾತ್ರೆಯನ್ನು ಅಚಾತುರ್ಯದಿಂದ ಆರೋಗ್ಯ ಸಹಾಯಕಿ ವಿತರಿಸಿದ್ದರು.  ತೀವ್ರ ಅಸ್ವಸ್ಥರಾದ ಏಳು ಮಂದಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಂತುಹುಳುವಿನ ಮಾತ್ರೆ ಸೇವಿಸಿದ ಮಕ್ಕಳು ಈಗ ಹೊಟ್ಟೆನೋವಿನಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಹೊರಳಾಟ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ