ಬೆಂಗಳೂರಿನಲ್ಲಿ ಒಡೆದ ಪೈಪ್ ಲೈನ್ : ನೀರು ಪೂರೈಕೆಯಲ್ಲಿ ವ್ಯತ್ಯಯ

ಶುಕ್ರವಾರ, 24 ಅಕ್ಟೋಬರ್ 2014 (13:07 IST)
ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮದಲ್ಲಿ ಜನರು ಮುಳುಗಿರುವ ನಡುವೆ  ಹಲವೆಡೆ ನೀರು ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿರುವುದು ದೀಪಾವಳಿಯ ಆಚರಣೆಗೆ ಅಡ್ಡಿಯಾಗುತ್ತಿದೆ.  ಬೆಗ್ಗರ್ ಕಾಲೋನಿ ಬಳಿ ಪಂಪ್ ಹೌಸ್ ಪೈಪ್ ಲೈನ್ ಡೆದುಹೋಗಿರುವುದರಿಂದ ರಾಜಾಜಿನಗರ, ಮಾಗಡಿ ರೋಡ್, ನಂದಿನಿ ಲೇಔಟ್‌ಗಳಿಗೆ ನೀರು ಪೂರೈಕೆಗೆ ತೊಂದರೆಯಾಗಿದೆ. ಇದರಿಂದ ದೀಪಾವಳಿಯಲ್ಲಿ ಬಗೆ, ಬಗೆಯ ತಿನಿಸು, ಭೋಜನ ತಯಾರಿಸಲು ನೀರಿಲ್ಲದೇ ಜನರು ಪರದಾಡುವಂತಾಗಿದೆ. 

90 ದಶಲಕ್ಷ ಲೀಟರ್ ನೀರು ಪೋಲಾಗಿದ್ದು, ಗ್ಯಾಸ್ ಪೈಪ್‌ಲೈನ್ ಒತ್ತಡಕ್ಕೆ ಒಡೆದುಹೋಗಿರಬಹುದೆಂದು ಶಂಕಿಸಲಾಗಿದೆ. ನೀರಿನ ಪೂರೈಕೆ ವ್ಯತ್ಯಯದಿಂದ ದೀಪಾವಳಿ ಹಬ್ಬವನ್ನು ನೀರಿನ ಕೊರತೆಯೊಂದಿಗೆ ಸಾರ್ವಜನಿಕರು ಆಚರಿಸಬೇಕಾಗಿದೆ. ಪೈಪ್ ಲೈನ್ ದುರಸ್ತಿ ಕಾರ್ಯಭರದಿಂದ ಸಾಗುತ್ತಿದೆ.

ನೀರಿನ ಪೈಪ್ ಬಳಿಯ ಗ್ಯಾಸ್ ಪೈಪ್ ಲೈನ್ ಹಾದುಹೋಗಿದ್ದು, ಅದರ ಒತ್ತಡದಿಂದಾಗಿ ನೀರಿನ ಪೈಪ್ ಒಡೆದುಹೋಗಿರಬಹುದೆಂದು ಶಂಕಿಸಲಾಗಿದೆ. 

ವೆಬ್ದುನಿಯಾವನ್ನು ಓದಿ