ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪೇದೆಗಳು

ಬುಧವಾರ, 28 ಜನವರಿ 2015 (09:55 IST)
ಪ್ರಕರಣವೊಂದನ್ನು ಮುಚ್ಚಿ ಹಾಕಲು ಆರೋಪಿಗಳಿಂದ 50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಲೋಕಾಯುಕ್ತ ಪೊಲೀಸರು ನಿನ್ನೆ ಸಂಜೆ 6.30ರ ವೇಳೆಯಲ್ಲಿ ಬಂಧಿಸಿದ್ದಾರೆ. 
 
ಬಂಧಿತ ಪೇದೆಗಳನ್ನು ಶಿವಮಾಮ ಹಾಗೂ ಶಿವಕುಮಾರ್ ಎನ್ನಲಾಗಿದ್ದು, ನಗರದ ಮೈಕೋ ಲೇಔಟ್ ಠಾಣೆಯಲ್ಲಿ ಪೇದೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ವೇಳೆಯಲ್ಲಿ ಇವರೊಂದಿಗೆ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಕೂಡ ಇದ್ದರು ಎನ್ನಲಾಗಿದ್ದು, ಲೋಕಾಯುಕ್ತ ಪೊಲೀಸರು ಆವರಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ಪ್ರಕರಣವೊಂದನ್ನು ಕೈ ಬಿಡುವ ಸಲುವಾಗಿ ಈ ಪೊಲೀಸರ ತಂಡ 2 ಲಕ್ಷಕ್ಕೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಒಪ್ಪಿದ ಆರೋಪಿಗಳು ಮೊದಲ ಹಂತದಲ್ಲಿ 50 ಸಾವಿರ 1/28/2015ರೂ. ನೀಡಲು ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಗಧಿತ ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು 50 ಸಾವಿರ ನಗದು ಹಣ ಪಡೆಯುತ್ತಿದ್ದರು. ಇದೇ ವೇಳೆ, ಗಮನಿಸಿದ ಲೋಕಾಯುಕ್ತ ಪೊಲೀಸರು ಘಟನೆಯನ್ನು ನೇರವಾಗಿ ಕಂಡು ಆರೋಪಿ ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ. 
 

ವೆಬ್ದುನಿಯಾವನ್ನು ಓದಿ