ಜೂಜುಗಾರರೊಂದಿಗೆ ಪೇದೆಗಳ ಕರಾಮತ್ತು: ಪೊಲೀಸ್ ಅಂಗಳದಿಂದ ಔಟ್

ಶುಕ್ರವಾರ, 19 ಡಿಸೆಂಬರ್ 2014 (15:49 IST)
ಇಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಪೇದೆಗಳು ಮನೆಯೊಂದರಲ್ಲಿ ಜೂಜಾಡುತ್ತಿದ್ದ ಆರೋಪಿಗಳನ್ನು ಯಶಸ್ವಿಯಾಗಿ ಹಿಡಿದರೂ ಕೂಡ ಕೇಸು ದಾಖಲಿಸದ ಕಾರಣ ಪೊಲೀಸ್ ಇಲಾಖೆಯಿಂದಲೇ ಔಟ್ ಆಗಿದ್ದಾರೆ! 
 
ನಗರದ ವಿನೋಭಾನಗರದ ಮನೆಯೊಂದರಲ್ಲಿ ಜೂಜಾಡುತ್ತಿದ್ದವರನ್ನು ಇಬ್ಬರು ಪೊಲೀಸ್ ಪೇದೆಗಳು ಯಶಸ್ವಿಯಾಗಿ ಹಿಡಿದ್ದರು. ಅಲ್ಲದೆ ಅವರ ಬಳಿ ಇದ್ದ ಸುಮಾರು 70 ಸಾವಿರಕ್ಕೂ ಹೆಚ್ಚು ಹಣವನ್ನು ವಶಕ್ಕೆ ಪಡೆದಿದ್ದ ಪೇದೆಗಳು, ಜೂಜುಗಾರರನ್ನು ಹಿಡಿದ ಮಾಹಿತಿಯನ್ನು ಇಲಾಖೆಯ ಉನ್ನತಾಧಿಕಾರಿಗಳಿಗೂ ತಿಳಿಸದೆ, ಅವರ ವಿರುದ್ಧ ದೂರೂ ದಾಖಲಿಸಿಕೊಳ್ಳದೇ ಇದ್ದ ಕಾರಣ ತಮ್ಮ ಸರ್ಕಾರಿ ಕೆಲಸವನ್ನೇ ಕಳೆದುಕೊಂಡು ಪರಿತಪಿಸುವಂತಾಗಿದ್ದಾರೆ. 
 
ಹೌದು, 15ರಿಂದ 20 ಮಂದಿ ಇದ್ದ ತಂಡವೊಂದು ನಗರದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿದ್ದ ಪೇದೆಗಳು ಅವರ ಬಳಿ ಇದ್ದ 70 ಸಾವಿರ ಹಣ ಪಡೆದಿದ್ದರು. ಆದರೆ ಯಾರ ವಿರುದ್ಧವೂ ದೂರು ದಾಖಲಿಸಿಕೊಂಡಿರಲಿಲ್ಲ. ಆದ್ದರಿಂದ ಜೂಜುಗಾರರ ತಂಡದ ಸದಸ್ಯರು ಮನೆ ಮಾಲೀಕ ಮಂಜುನಾಥ್‌ಗೆ ತಿಳಿಸಿದ್ದಾರೆ. ಬಳಿಕ ಮನೆ ಮಾಲೀಕರು ಜಿಲ್ಲಾ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಪೇದೆಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಪೇದೆಗಳನ್ನು ಮಲ್ಲನಾಯಕ್ ಹಾಗೂ ತೇಜಪ್ಪ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ