ರೌಡಿ ಶೀಟರ್ ವೆಂಕಟೇಶ್ ಮೇಲೆ ಪೊಲೀಸರ ಫೈರಿಂಗ್

ಮಂಗಳವಾರ, 19 ಆಗಸ್ಟ್ 2014 (11:25 IST)
ಬೆಂಗಳೂರಿನಲ್ಲಿ ರೌಡಿ ಶೀಟರ್ ವೆಂಕಟೇಶ್ ಎಂಬವನ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ನಡೆದಿದೆ. ವೆಂಕಟೇಶ್ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ತಡರಾತ್ರಿ 2 ಗಂಟೆ ಸುಮಾರಿಗೆ ನಿರ್ದಿಷ್ಟ ಸ್ಥಳಕ್ಕೆ ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು.   ಆ.13ರಂದು ಆರೋಪಿ ಮೌರ್ಯ ಹೊಟೆಲ್ ಬಳಿ ಇಂಡಿಕಾ ಕಾರು ಬಿಟ್ಟು ಪರಾರಿಯಾಗಿದ್ದ. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದರು.

ರೌಡಿ ವೆಂಕಟೇಶ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದಾಗ ಪೊಲೀಸರು ಗುಂಡು ಹಾರಿಸಿದರು. ವೆಂಕಟೇಶ್ ಕಾಲಿಗೆ ಗುಂಡಿನೇಟು ಬಿದ್ದ ಬಳಿಕ ಪೊಲೀಸರು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.  ವೆಂಕಟೇಶ್ ಅಲಿಯಾಸ್ ಕೆಂಚನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ದರೋಡೆ, ಸುಲಿಗೆ, ಕಿಡ್‌ನ್ಯಾಪ್ ಮುಂತಾದ ಪ್ರಕರಣಗಳು ದಾಖಲಾಗಿವೆ.

ಖಾಸಗಿ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಅವನು 18ನೇ ವರ್ಷಕ್ಕೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ.  ಉಡುಪಿಯಲ್ಲಿ ಕೂಡ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಎಸ್ಸೆಸ್ಸೆಲ್ಸಿ ನಪಾಸಾದ ಬಳಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವೆಂಕಟೇಶ್ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನಂತರ ಅವಳ ಜೊತೆ ಜಗಳವಾಡಿಕೊಂಡು ಸಂಬಂಧ ತ್ಯಜಿಸಿದ್ದ.  

ವೆಬ್ದುನಿಯಾವನ್ನು ಓದಿ