ಪೊಲೀಸರು ಪ್ರತಿಭಟನೆಯಲ್ಲಿ ಪಾಲ್ಗೊಂಡಲ್ಲಿ ಉದ್ಯೋಗದಿಂದ ವಜಾ: ಜಿ.ಪರಮೇಶ್ವರ್ ವಾರ್ನಿಂಗ್

ಶುಕ್ರವಾರ, 3 ಜೂನ್ 2016 (18:26 IST)
ನಾಳೆ ರಾಜ್ಯಾದ್ಯಂತ ಪೊಲೀಸರು ಕರೆ ನೀಡಿರುವ ಪ್ರತಿಭಟನೆಗೆ ಪೊಲೀಸರು ಭಾಗಿಯಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಖಡಕ್ ಸೂಚನೆ ಹೊರಡಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪೊಲೀಸ್ ಕ್ವಾಟರ್ಸ್‌ನಲ್ಲಿರುವ ಪೊಲೀಸ್ ಕುಟುಂಬಗಳು ಪ್ರತಿಭಟನೆಯಲ್ಲಿ ಭಾಗಿಯಾದರೆ ಅವರ ಕ್ವಾಟರ್ಸ್‌ನ್ನು ಖಾಲಿ ಮಾಡಿಸುವುದಲ್ಲದೇ ಅವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
 
ರಾಜ್ಯ ಪೊಲೀಸರ ಬೇಡಿಕೆಗಳನ್ನು ಆಲಿಸಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಕಡ್ಡಾಯ ವಾರದ ರಜೆ ನೀಡುವುದನ್ನು ಜಾರಿ ಮಾಡುತ್ತೇವೆ. ಹೊಸದಾಗಿ 15000 ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
 
ರಾಜ್ಯ ಪೊಲೀಸರು ಪಡಿತರ ವ್ಯವಸ್ಥೆಯ ಬದಲು ನಗದು ಹಣ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಕುರಿತು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ. ನಮ್ಮ ಈ ಮೂರು ವರ್ದ ಆಡಳಿತದಲ್ಲಿ 4316 ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 11 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ