ಪೊಲೀಸರು ಪ್ರತಿಭಟನೆ ಕೈ ಬಿಟ್ಟು ಚರ್ಚೆಗೆ ಬರಲಿ: ಡಾ.ಜಿ.ಪರಮೇಶ್ವರ್

ಶನಿವಾರ, 28 ಮೇ 2016 (16:27 IST)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೂನ್ 4 ರಂದು, ರಾಜ್ಯಾದ್ಯಂತ ಪೊಲೀಸರು ಕೈಗೊಂಡಿರುವ ಸಾಮೂಹಿಕ ಪ್ರತಿಭಟನೆ ಮಹತ್ವದಲ್ಲ ಎಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
 
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಮ್ಯಾನೂವಲ್ ಪ್ರಕಾರ ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ. ಪೊಲೀಸ್ ಇಲಾಖೆ ಶಿಸ್ಥಿನ ಇಲಾಖೆ, ಅವರು ತಮ್ಮ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. 
 
ಜೂನ್ 4 ರಂದು, ರಾಜ್ಯಾದ್ಯಂತ ಪೊಲೀಸರು ಪ್ರತಿಭಟನೆಗೆ ಭಾಗಿಯಾಗುವಂತೆ ಕರೆ ನೀಡಿರುವ ಸಂಸ್ಥೆ ಅಧಿಕೃತವಲ್ಲ. ಈ ಸಂಘಟನೆಯಲ್ಲಿ ಕೇವಲ ನಿವೃತ್ತ ಪೊಲೀಸರೇ ಇದ್ದಾರೆ. ಆದ್ದರಿಂದ ಪೊಲೀಸರ ಪ್ರತಿಭಟನೆಯನ್ನು ಮಹತ್ವದ್ದು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ಪೊಲೀಸರು ನಡೆಸುತ್ತಿರುವ ಪ್ರತಿಭಟನೆಗೆ ಬಹುತೇಕ ಪೊಲೀಸರು ಬೆಂಬಲ ನೀಡಿಲ್ಲ. ಕೆಲವು ಪೊಲೀಸರು ಮಾತ್ರ ರಜೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳಿಂದ ಅವರ ಮನವೊಲಿಸಿ ರಜೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ