ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ಕೋರಿ ಪೊಲೀಸರಿಂದ ಮನವಿ

ಶನಿವಾರ, 28 ಮೇ 2016 (17:28 IST)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೂನ್ 4 ರಂದು, ರಾಜ್ಯಾದ್ಯಂತ ಪೊಲೀಸರು ಕೈಗೊಂಡಿರುವ ಸಾಮೂಹಿಕ ಪ್ರತಿಭಟನೆಗೆ ರಜೆ ನೀಡಿ, ಇಲ್ಲವಾದ್ರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
 
ರಾಜ್ಯದಲ್ಲಿ ಪೊಲೀಸರು ಪ್ರಪ್ರಥಮ ಭಾರಿಗೆ ಜೂನ್ 4 ರಂದು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ರಾಜ್ಯ ಗೃಹ ಸಚಿವರು ಪೊಲೀಸರ ಪ್ರತಿಭಟನೆ ಮಹತ್ವದಲ್ಲ ಎಂದು ತೀರ್ಮಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡಿ ಎಂದು ಬೆದರಿಕೆಯೊಡ್ಡಿದ್ದಾರೆ.
 
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯ 17 ಪೊಲೀಸ್ ಸಿಬಂದ್ದಿಗಳು ಜೂನ್ 4 ರಂದು ಪೊಲೀಸರು ನಡೆಸುತ್ತಿರುವ ಸಾಮೂಹಿಕ ಪ್ರತಿಭಟನೆ ನಡೆಸಲು ಸಾಮೂಹಿಕ ರಜೆ ನೀಡದೆ ಹೋದರೆ, ಕುಟುಂಬ ಸದಸ್ಯರೊಂದಿಗೆ ಸ್ವಇಚ್ಚೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ತಮ್ಮ ಠಾಣೆಯ ಎಸ್‌ಐ ರಾಮಚಂದ್ರ ನಾಯಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.  

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ