ಕಿಸ್ ಆಫ್ ಲವ್‌ ಆಚರಣೆಗೆ ಪೊಲೀಸ್ ಅನುಮತಿ ನಿರಾಕರಣೆ

ಮಂಗಳವಾರ, 25 ನವೆಂಬರ್ 2014 (17:35 IST)
ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ಕೊಡೋದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಅನುಮತಿ ನೀಡಿದರೆ ಬೇರೆ ರಾಜ್ಯಗಳಲ್ಲಿ ನಡೆದ ಘಟನೆಗಳ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ನಡೆಯುವ ಸಾಧ್ಯತೆಯಿದೆ. ಸಾರ್ವಜನಿಕ ಜೀವನದಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಅನುಮತಿ ನೀಡಿದರೆ ಸೆಕ್ಷನ್ 294ಎ ಐಪಿಸಿ ಉಲ್ಲಂಘನೆಯಾಗುತ್ತದೆ.

ಆದ್ದರಿಂದ ನಮ್ಮ ಕರ್ತವ್ಯವನ್ನು ನಾವು ಪರಿಪಾಲನೆ ಮಾಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಿದ್ದೇವೆ ಎಂದು ರೆಡ್ಡಿ ಹೇಳಿದ್ದಾರೆ. ಕಿಸ್ ಆಫ್ ಆಚರಣೆಯನ್ನು ಯಾವ ರೀತಿ ಮಾಡುತ್ತೀರಾ ಎಂದು ಆಯೋಜಕರನ್ನು ಕೇಳಿದಾಗ ಸ್ಪಷ್ಟವಾಗಿ ವಿವರಣೆ ನೀಡಲಿಲ್ಲ.

 ಎಷ್ಟು ಜನ ಬರ್ತಾರೆ ಎಂಬ ಪೊಲೀಸ್ ಇಲಾಖೆ ಕೇಳಿದ ಪ್ರಶ್ನೆಗೆ ಕೂಡ ಸರಿಯಾದ ವಿವರಣೆ ನೀಡಿರಲಿಲ್ಲ. ಕಿಸ್ ಆಫ್ ಲವ್ ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆಗೆ ಸೂಕ್ತ ಉತ್ತರವೂ ಸಿಗಲಿಲ್ಲವಾದ್ದರಿಂದ ಕಿಸ್ ಆಫ್ ಲವ್ ಆಚರಣೆಯನ್ನು ಪೊಲೀಸ್ ಇಲಾಖೆ ತಿರಸ್ಕರಿಸಿದೆ.  

ವೆಬ್ದುನಿಯಾವನ್ನು ಓದಿ