ಯಮೆನ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಭಾರತೀಯರ ರಕ್ಷಣೆಗೆ ವಿಮಾನ

ಶುಕ್ರವಾರ, 3 ಏಪ್ರಿಲ್ 2015 (15:27 IST)
ಯಮೆನ್ ದೇಶದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಪರಿಣಾಮ ಅಲ್ಲಿನ ಭಾರತೀಯರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವ ಸಲುವಾಗಿ ಸ್ವದೇಶೀಯ ನಾಗರೀಕ ವಿಮಾನವೊಂದು ದೇಶದ ರಾಜಧಾನಿ ಸನಾದಲ್ಲಿ ಬೀಡು ಬಿಟ್ಟಿದೆ.  
 
ಮುಸ್ಲಿಂ ಪ್ರಧಾನ ರಾಷ್ಟ್ರವಾದ ಯಮೆನ್‌ನಲ್ಲಿ ಪ್ರಸ್ತುತ ರಾಜಕಿಯ ಬಿಕ್ಕಟ್ಟು ತಲೆದೋರಿದ್ದು, ಅಲ್ಲಿನ ಜನರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಂದ ವಲಸೆ ಹೋಗಿ ಅಲ್ಲಿ ಉದ್ಯೋಗ ಕಂಡುಕೊಂಡಿದ್ದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ ಭಾರತೀಯರೂ ಕೂಡ ಹೊರತಾಗಿಲ್ಲ.
 
ಪ್ರಸ್ತುತ 5000ಕ್ಕೂ ಹೆಚ್ಚು ಮಂದಿ ಭಾರತೀಯ ಪ್ರಜೆಗಳು ಇಲ್ಲಿ ನೆಲೆಸಿದ್ದು, ಭಾರತ ಸರ್ಕಾರವು ಇವರಲ್ಲಿ 700 ಮಂದಿ ಭಾರತೀಯರನ್ನು ಈಗಾಗಲೇ ರಕ್ಷಿಸಿದೆ. ಉಳಿದವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ವಾಯುಪಡೆಯ ನಾಗರೀಕ ವಿಮಾನವೊಂದು ಸದ್ದಿಲ್ಲದೆ ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂದಾಗಿದೆ.  
 
ಕಾರ್ಯಚರಣೆಯ ಎಲ್ಲಾ ಜವಾಬ್ದಾರಿಯನ್ನು ಅಲ್ಲಿನ ಭಾರತೀಯ ರಾಯಭಾರ ಕಚೇರಿಯೇ ನೋಡಿಕೊಳ್ಳುತ್ತಿದ್ದು, ಈ ಹಿಂದೆ ಬಿಕ್ಕಟ್ಟು ಹಾಗೂ ಪ್ರಜೆಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಅಗತ್ಯ ಸಹಕಾರಕ್ಕೆ ಮನವಿ ಮಾಡಿತ್ತು. ಆದ್ದರಿಂದ ಕೇಂದ್ರ ಸರ್ಕಾರ ನಾಗರೀಕ ವಿಮಾನ ಏರ್ ಇಂಡಿಯಾ ವಿಮಾನವನ್ನು ಕಳುಹಿಸಿಕೊಟ್ಟಿದ್ದು, ದೇಶದ ರಾಜಧಾನಿ ಸನಾದಲ್ಲಿ ಬೀಡು ಬಿಟ್ಟಿದೆ. ಅಲ್ಲದೆ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗಿದೆ. 

ವೆಬ್ದುನಿಯಾವನ್ನು ಓದಿ