ಮರಣೋತ್ತರ ಪರೀಕ್ಷೆ ವರದಿ: ಆತ್ಮಹತ್ಯೆಯಿಂದಲೇ ಸಿಂಗ್ ಸಾವು

ಬುಧವಾರ, 29 ಏಪ್ರಿಲ್ 2015 (16:59 IST)
ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮೃತ ದೇಹದ ಮರಣೋತ್ತರ ಪರೀಕ್ಷೆಯ ಫಲಿತಾಂಶ ಬಂದಿದ್ದು, ನೇಣು ಬಿಗಿದುಕೊಂಡ ಪರಿಣಾಮವೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದೆ. 
 
ವೈದ್ಯರು ನೀಡಿರುವ ವರದಿಯಲ್ಲಿ, ಸಾವನ್ನಪ್ಪಿದ ವ್ಯಕ್ತಿಯು ಮರದ ಮೇಲಿನಿಂದ ಕೆಳಗೆ ಬಿದ್ದಿರುವ ಪರಿಣಾಮವೇ ಮೈಯ್ಯಲ್ಲಿ ಗಾಯಗಳಾಗಿದ್ದು, ನೇಣು ಬಿಗಿದುಕೊಂಡ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 
 
ಇನ್ನು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಎಎಪಿ ರೈತರೊಂದಿಗೆ ಬೃಹತ್ ಧರಣಿ ಹಮ್ಮಿಕೊಂಡಿತ್ತು. ಈ ವೇಳೆ ಪಂಜಾಬ್ ಮೂಲದ ರೈತ ಗಜೇಂದ್ರ ಸಿಂಗ್ ಅವರು ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ್ದರು. ಬಳಿಕ ಎಎಪಿ ಪಕ್ಷದ ಕಾರ್ಯಕರ್ತರೇ ಸಿಂಗ್ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಪ್ರಕರಣವು ಪ್ರಸ್ತುತ ತನಿಖೆ ಹಂತದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ