ಬೇಸಿಗೆ ಬಿಸಿ ಜೊತೆಗೆ ತಟ್ಟಲಿದೆ ವಿದ್ಯುತ್ ದರ ಏರಿಕೆ ಬಿಸಿ

ಮಂಗಳವಾರ, 21 ಫೆಬ್ರವರಿ 2017 (10:59 IST)
ಇನ್ನೇನು ಬೇಸಿಗೆ ಆರಂಭವಾಗಲಿದೆ. ಬಿಸಿಲಿನ ಝಳದ ನಡುವೆ ಪವರ್ ಕಟ್ ಸಮಸ್ಯೆಯೂ ಶುರುವಾಗಲಿದೆ. ಇದರ ಜೊತೆಗೆ ನಿಮಗೆ ವಿದ್ಯುತ್ ದರ ಏರಿಕೆಯ ಶಾಕ್ ಕೂಡ ತಟ್ಟುವ ಸಾಧ್ಯತೆ ಇದೆ.


ವಿದ್ಯುತ್ ದರ ಏರಿಕೆ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಪ್ರತಿ ಯೂನಿಟ್`ಗೆ 1.48 ರೂ. ಏರಿಕೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜೊತೆಯೂ ಕೆಇಆರ್ ಸಿ ಅಧ್ಯಕ್ಷರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಂದೊಮ್ಮೆ ಸರ್ಕಾರ, ಕೆಇಆರ್ ಸಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಮಾರ್ಚ್ ತಿಂಗಳಲ್ಲಿ ಬೆಲೆ ಏರಿಕೆ ಜಾರಿಯಾಗುವ ಸಾಧ್ಯತೆ ಇದೆ. ಆದರೆ, ಸರ್ಕಾರ ಪೂರ್ತಿ 1.48 ರೂ. ಏರಿಕೆಗೆ ಅನುಮೋದನೆ ಕೊಡುತ್ತಾ..? ಅಥವಾ ಅದರಲ್ಲಿ ಕಡಿತ ಮಾಡುತ್ತಾ ಎಂಬುದು ನಿರ್ಧಾರ ಹೊರಬಿದ್ದ ಮೇಲೇ ತಿಳಿಯಲಿದೆ.

 

ವೆಬ್ದುನಿಯಾವನ್ನು ಓದಿ