ಆಸ್ಪತ್ರೆಯಲ್ಲಿ ಮಗನನ್ನ ನೋಡಿ ಪ್ರಥಮ್ ತಂದೆ ಹೇಳಿದ್ದು

ಬುಧವಾರ, 5 ಏಪ್ರಿಲ್ 2017 (14:38 IST)
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಮಗ ಪ್ರಥಮ್`ನನ್ನ ತಂದೆ ಮಲ್ಲಣ್ನ ಭೇಟಿಯಾಗಿದ್ದಾರೆ. ನಾಗರಬಾವಿ ಬಳಿಯ ಫೋರ್ಟಿಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ಭೇಟಿಯಾದ ಮಲ್ಲಣ್ಣ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಮಗನ ಸ್ಥಿತಿ ಕಂಡು ತುಂಬಾ ನೋವಾಗುತ್ತಿದೆ. ವೈದ್ಯರು 3-4 ಗಂಟೆ ಆಸ್ಪತ್ರೆಯಲ್ಲೇ ಇರಬೇಕೆಂದು ಹೇಳಿದ್ದಾರೆ. ಬಿಗ್ ಬಾಮಸ್ ಗೆದ್ದ ಹಣ ಡ್ರಾ ಮಾಡಲು ಪಾನ್ ಕಾರ್ಡ್ ತರಲು ಊರಿಗೆ ಹೋಗಿದ್ದೆ. ನಿನ್ನೆ ಸಂಜೆ ಕೂಡ ಅವನ ಜೊತೆ ಮಾತನಾಡಿದ್ದೆ ಎಂದು ಮಲ್ಲಣ್ಣ ನೋವು ತೋಡಿಕೊಂಡಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ನವದೆಹಲಿಗೆ ತೆರಳಿ ಮೋದಿಯನ್ನ ಭೇಟಿಯಾಗಿ ಯೋಧರಿಗೆ ಹಣ ನೀಡೋಣವೆಂದು ಪ್ರಥಮ್ ಹೇಳಿದ್ದ. ಅಷ್ಟರೊಳಗೆ ಹೀಗೆ ಮಾಡಿಕೊಂಡಿದ್ದಾನೆಂದು ಮಲಲಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ