ಡಿಡಿಪಿಐ ಮುಂದೆ ದಡ್ಡತನ ತೋರಿದ ಪ್ರಾಥಮಿಕ ಶಾಲಾ ಶಿಕ್ಷಕರು

ಶನಿವಾರ, 5 ಸೆಪ್ಟಂಬರ್ 2015 (10:12 IST)
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ಶಿಕ್ಷಕರಲ್ಲಿ ಮೂಲ ಆಂಗ್ಲ ಭಾಷಾ ಪ್ರಾವಿಣ್ಯತೆಯ ಕೊರತೆ ಇದೆ ಎಂದು ಜಿಲ್ಲೆಯಲ್ಲಿ ಇಂದು ಸಾಬೀತಾಗಿದೆ. 
 
ಶಿಕ್ಷಣ ಇಲಾಖೆಯ ರಾಯಚೂರು ತಾಲೂಕು ಡಿಡಿಪಿಐ ನೇತೃತ್ವದಲ್ಲಿ ಪರೀಕ್ಷೆಯೊಂದನ್ನು ನಡೆಸಲಾಗಿದ್ದು, ಈ ವೇಳೆ ಇಂತಹ ಸನ್ನಿವೇಶ ಕಂಡು ಬಂದಿದೆ. 
 
ಸನ್ನಿವೇಶ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಡಿಡಿಪಿಐ ಅಧಿಕಾರಿಗಳು ಇಲ್ಲಿನ ಅಸ್ತಿಹಾಳ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷರಿಗೆ ಕೆಲ ಪದಗಳನ್ನು ಆಂಗ್ಲ ಭಾಷೆಯಲ್ಲಿ ಬರೆಯುವಂತೆ ಸೂಚಿಸಿದರು. ಈ ವೇಳೆ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯರು ಆಂಗ್ಲಭಾಷೆಯಲ್ಲಿ ತಪ್ಪು ತಪ್ಪಾಗಿ ಬರೆದರು. ಕೆಲವರು ಒಮ್ಮೆ ಬರೆದು ಮತ್ತೆ ಅಳಿಸಿ ಮತ್ತೊಮ್ಮೆ ಬರೆದರು. ಆಗಲೂ ತಪ್ಪಾಗಿ ಬರೆದು ಅಪಮಾನಕ್ಕೊಳಗಾದರು. 
 
ಇನ್ನು ಡಿಡಿಪಿಐ ಅವರು ರಾಧಾಕೃಷ್ಣನ್, ಟೀಚರ್ಸ್ ಡೇ, ರಿಪಬ್ಲಿಕ್ ಡೇ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲು ಶಿಕ್ಷಕರಿಗೆ ಸೂಚಿಸಿದರು. 
ಶಿಕ್ಷಕರು ಬರೆದದ್ದು, Radhakrushnan, teacherday, repablic day ಎಂದು ಬರೆದದ್ದು ಕಂಡು ಬಂತು. 

ವೆಬ್ದುನಿಯಾವನ್ನು ಓದಿ