ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯ

ಶನಿವಾರ, 27 ಫೆಬ್ರವರಿ 2016 (17:23 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 74 ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ.
 
ಬಿಜೆಪಿ ಘಟಕ ಆಯೋಜಿಸಿದ ರೈತರ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶುಭ ಕೋರಿ ರಾಜ್ಯದ ಜನತೆಗೆ ಮತ್ತಷ್ಟು ಸೇವೆ ನೀಡುವಂತೆ ಹುರಿದುಂಬಿಸಿದ್ದಾರೆ. 
 
ಬಿಎಸ್‌ವೈ ಹುಟ್ಟು ಹಬ್ಬದ ದಿನದಂದು ರೈತರ ಸಮಾವೇಶ ಹಮ್ಮಿಕೊಂಡಿರುವುದು ಸಂತದ ಸಂಗತಿ ಎಂದು ಹೇಳಿದರು.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.
 
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿತ್ತು. ಯಡಿಯೂರಪ್ಪ ರೈತರಿಗಾಗಿ ಗ್ರಾಮ ಗ್ರಾಮಗಳಿಗೆ ಭೇಟಿ ರೈತರ ಸಂಕಷ್ಟವನ್ನು ಪರಿಹರಿಸಿದ್ದರು ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ವೆಬ್ದುನಿಯಾವನ್ನು ಓದಿ