ಖಾಸಗಿ ಬಸ್ ಬೈಕ್ಡಿ‌ಗೆ ಡಿಕ್ಕಿಹೊಡೆದು ಮೂವರ ಸಾವು

ಮಂಗಳವಾರ, 25 ನವೆಂಬರ್ 2014 (18:07 IST)
ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ಶಿವಮೊಗ್ಗ ಸೊರಬ ತಾಲೂಕಿನ ಬಿಳವಗೋಡು ಗ್ರಾಮದ ಬಳಿ ಈ ಪ್ರಕರಣ ದಾಖಲಾಗಿದೆ. ಮೃತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನವರು ಎನ್ನಲಾಗಿದೆ.

ಇವರು ಮಧ್ಯಾಹ್ನದ ಸಂಬಂಧಿಕರ ಮನೆಗೆ ಹೊಸ ಬೈಕ್‌ನಲ್ಲಿ ಬರುತ್ತಿದ್ದರು. ತಿರುವಿನಲ್ಲಿ ಬೈಕ್ ವೇಗವಾಗಿ ಬಂದಿದ್ದರಿಂದ ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿಹೊಡೆದು ಬೈಕ್‌ನಲ್ಲಿದ್ದ ಮೂವರು  ಮೃತಪಟ್ಟಿದ್ದಾರೆ.

 ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತಪಟ್ಟವರ ಹೆಸರುಗಳು ಇನ್ನೂ ಗೊತ್ತಾಗಿಲ್ಲ.

ವೆಬ್ದುನಿಯಾವನ್ನು ಓದಿ