ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ ಸರ್ಕಾರ ನಿಗದಿಗೆ ವಿರೋಧ: ಬೀದಿಗಳಿದ ವೈದ್ಯರು

ಶುಕ್ರವಾರ, 16 ಜೂನ್ 2017 (11:19 IST)
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಸರ್ಕಾರದಿಂದ ದರ ನಿಗದಿ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಬೀದಿಗಿಳಿದಿದ್ದಾರೆ. 2000ಕ್ಕೂ ಹೆಚ್ಚು ಆಸ್ಪತ್ರೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ.

ಹಲವು ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನಿಲ್ಲಿಸಿದ್ದು, ನಗರದ ರೈಲ್ವೆ ನಿಲ್ದಾದಿಂದ ಫ್ರೀಡಂಪಾರ್ಕ್ ವರೆಗೆ ಜಾಥಾ ನಡೆಸುತ್ತಿದ್ದಾರೆ. ಫ್ರೀಂಡಂಪಾರ್ಕ್`ನಲ್ಲಿ ಪ್ರತಿಭಟನೆ ನಡೆಸುವ ವೈದ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಹಣ ವಸೂಲಿ, ಬಿಲ್ ಕಟ್ಟುವವರೆಗೂ ಶವ ನೀಡುವುದಿಲ್ಲ ಎಂಬ ಆರೋಪ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಜನರ ಕೈಗೆಟುವ ದರದಲ್ಲಿ ಖಾಸಗಿ ಆಸ್ಪತ್ರಗಳಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ಸಿಗಬೇಕೆಂಬ ಉದ್ಧೇಶದಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕ ಜಾರಿಗೆ ನಿರ್ಢರಿಸಿದೆ.

ಈ ತಿದ್ದುಪಡಿ ಕಾಯ್ದೆ ಅನ್ವಯ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗಳಿಗೆ ಸರ್ಕಾರವೇ ಶುಲ್ಕ ನಿಗದಿ ಮಾಡಲಿದೆ. ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಯಾಗಲಿದೆ. ಜೊತೆಗೆ ಯಾರಾದರೂ ಆಸ್ಪತ್ರೆಯಲ್ಲಿ ಮೃತಪಟ್ಟರೆ ಹಣ ಪಾವತಿಸುವವರೆಗೂ ಶವ ನೀಡುವುದಿಲ್ಲ ಎಂದು ಹೇಳುವುದಿಲ್ಲ. ಮೃತದೇಹವನ್ನ ಸಂಬಂಧಿಕರಿಗೆ ಕೊಟ್ಟು ನಂತರ ಹಣವನ್ನ ಪಡೆಯಬೇಕು ಎಂಬ ನಿಯಮ ಸೇರಿ ಹಲವು ಜನಸ್ನೇಹಿ ನಿಯಮಗಳು ಇದರಲ್ಲಿವೆ. ಸರ್ಕಾರ ನಿಗದಿ ಮಾಡುವ ಚಿಕಿತ್ಸಾ ವೆಚ್ಚ ಕಡಿಮೆ ಇರುವುದರಿಂದ ಖಾಸಗಿ ಆಸ್ಪತ್ರೆಗಳು ನಡೆಸುವುದು ಕಷ್ಟ ಎಂಬುದು ವೈದ್ಯರು ಸಮರ್ಥನೆಯಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

 

ವೆಬ್ದುನಿಯಾವನ್ನು ಓದಿ