ಮಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ್ದಕ್ಕೆ ತಂದೆ ಅಮಾನತು

ಶನಿವಾರ, 2 ಆಗಸ್ಟ್ 2014 (11:55 IST)
ತನ್ನ ಮಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಆರೋಪದ ಮೇಲೆ ಉಪನ್ಯಾಸಕ ಡಾ. ಶರತ್ ಬಾಬು ಅವರನ್ನು ಧಾರವಾಡ ವಿಶ್ವವಿದ್ಯಾಲಯ ಅಮಾನತು ಮಾಡುವ ಆದೇಶ ಹೊರಡಿಸಲಿದೆ.

ಯುಜಿಸಿ ನಿಯಮಗಳ ಪ್ರಕಾರ ಮೌಲ್ಯಮಾಪಕರು ರಕ್ತ ಸಂಬಂಧಿಗಳ ಉತ್ತರ ಪತ್ರಿಕೆಯನ್ನು  ಮೌಲ್ಯಮಾಪನೆ ಮಾಡುವಂತಿಲ್ಲ. ಹೀಗೆ ಮಾಡುವುದರಿಂದ ತಾರತಮ್ಯವಾಗಬಹುದು ಮತ್ತು  ಇತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು ಎಂಬುದು ಯುಜಿಸಿ ಕಾಳಜಿ. ಈ ನಿಯಮವನ್ನು ಉಲ್ಲಂಘಿಸಿರುವ ಧಾರವಾಡದ ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಶರತ್ ಬಾಬು ಎಲ್ಎಲ್ಎಮ್  ಅಭ್ಯಸಿಸುತ್ತಿರುವ  ಮಗಳು ಬರೆದಿದ್ದ ಪರೀಕ್ಷೆಯ ಉತ್ತರ ಪತ್ರಿಕೆಯನನ್ನು ಮೌಲ್ಯಮಾಪನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 
 
ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದ ಶರತ್ ಬಾಬು ಮಗಳ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡುವಂತೆ ಹೇಳಿದ್ದರು.  ಅವರ ಮೇಲೆ ಈ ಆರೋಪವಷ್ಟೇ ಅಲ್ಲದೇ ವಿಶ್ವವಿದ್ಯಾಲಯದ ಅನುಮತಿ ಅಲ್ಲದೇ ತಮ್ಮ ಕೈಕೆಳಗಿನ  ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿದ ಆರೋಪ ಕೂಡ ಇದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ