ಅಧಿಕಾರಿಗಳಿಗೆ ಖಡಕ್ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ

ಸೋಮವಾರ, 16 ಮೇ 2016 (14:45 IST)
ನಿಗದಿತ ಸಮಯದಲ್ಲಿ ಯೋಜನೆಗಳು ಪೂರ್ಣಗೊಳಿಸುವಂತೆ ಆಯಾ ಇಲಾಖೆಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. 
ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗದಿಪಡಿಸಿರುವ ಕಾಲ ಮೀತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿದ್ದು, ಕಡತಗಳ ವಿಲೇವಾರಿಯಲ್ಲಿ ವಿಳಂಬವಾದರೆ ಆಯಾ ಇಲಾಖೆಯ ಕಾರ್ಯದರ್ಶಿಗಳ ಹೊಣೆ ಎಂದು ಖಡಕ್ ಆದೇಶ ನೀಡಿದ್ದಾರೆ.
 
2013-14 ರ ಆರ್ಥಿಕ ವರ್ಷದಲ್ಲಿ ಯೋಜನೆಗಳು 99 ಪ್ರತಿಶತ ಪ್ರಗತಿ ಕಂಡಿದ್ದು, 2014-15 ರ ಸಾಲಿನಲ್ಲಿ 94 ಪ್ರತಿಶತ ಮತ್ತು 2015-16 ಸಾಲಿನಲ್ಲಿ 95.5 ಪ್ರತಿಶತ ಪ್ರಗತಿ ಕಂಡಿದೆ. 2013-14 ರ ಸಾಲಿಗೆ ಹೋಲಿಸಿದರೆ ಯೋಜನೆಗಳ ಪ್ರಗತಿಯಲ್ಲಿ 3.5 ಪ್ರತಿಶತ ಕುಂಠಿತಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.
 
ಸ್ವಚ್ಚ ಭಾರತ ಯೋಜನೆಯ ಪ್ರಗತಿಯಲ್ಲೂ ಕುಂಠಿತ ಕಂಡುಬಂದಿದ್ದು, ಈ ಯೋಜನೆಗಾಗಿ 106.68 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕೇವಲ 23.80 ಕೋಟಿ ರೂಪಾಯಿ ಅನುದಾನ ಮಾತ್ರ ಬಳಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ