ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರು ಅರೆಸ್ಟ್

ಭಾನುವಾರ, 2 ಏಪ್ರಿಲ್ 2017 (16:05 IST)
ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
 
ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ಗ್ರಾಹಕನ ಸೋಗಿನಲ್ಲಿ ಪಾರ್ಲರ್‌ಗೆ ತೆರಳಿದ್ದಾರೆ. ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಖಚಿತವಾದ ನಂತರ ದಾಳಿ ಮಾಡಿದ್ದಾರೆ.
 
ಯುವತಿಯರು ಪ್ರತಿ ಗಂಟೆಗೆ 3 ಸಾವಿರ ರೂಪಾಯಿಗಳಿಂದ 15 ಸಾವಿರ ರೂಪಾಯಿಗಳವರೆಗೆ ದರವನ್ನು ನಿಗದಿಪಡಿಸಿದ್ದರು ಎನ್ನಲಾಗಿದೆ.
 
ಆರೋಪಿಗಳಾದ ಚಂದ್ರಪ್ರಕಾಶ್, ವಿಕ್ಟರ್, ವಿನ್ಸೆಂಟ್ ಮತ್ತು ಸಯ್ಯದ್ ಸೇರಿದಂತೆ ಕೆಲ ಯುವತಿಯರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಕರೆತರಲಾಗಿತ್ತು ಎಂದು ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ