ವೇಶ್ಯಾವಾಟಿಕೆ ಕಾನೂನು ಬದ್ದ: ಸಮಿತಿ ರಚನೆಗೆ ಸರಕಾರ ನಿರ್ಧಾರ

ಗುರುವಾರ, 16 ಅಕ್ಟೋಬರ್ 2014 (13:52 IST)
ವೇಶ್ಯಾವಾಟಿಕೆ ಕಾನೂನುಬದ್ದ ಮಾಡಬೇಕೆ ಎನ್ನುವ ಕುರಿತು ಸಮಗ್ರ ಅಧ್ಯಯನ ಅಗತ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಮಹಾದೇವಿ ಅವರ ತರ್ಕಕ್ಕೆ ನಾನು ಉತ್ತರ ನೀಡುವುದಿಲ್ಲ. ಆದರೆ, ವೇಶ್ಯಾವಾಟಿಕೆ ಕಾನೂನುಬದ್ಧ ಗೊಳಿಸುವ ಕುರಿತು ಸಮಿತಿ ರಚನೆ ಮಾಡಲಾಗಿದೆ.
 
ಇದರ ಕುರಿತು ಚಿಂತನೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೇಕು ಅಥವಾ ಬೇಡ ಎನ್ನುವ ಕುರಿತು ನಾನು ಈಗಲೇ ಉತ್ತರ ನೀಡಲಾರೆ. ಅದರ ಬಗ್ಗೆ ಅಧ್ಯಯನವಾಗಿ, ಯಾವುದು ಸೂಕ್ತ ಎನ್ನುವ ಕುರಿತು ನಿರ್ಧಾರಕ್ಕೆ ಬಂದ ಮೇಲೆಯೇ  ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ