ಮಾಜಿ ಸಚಿವ ಅಂಬರೀಶ್ ನಿವಾಸಕ್ಕೆ ಪ್ರತಿಭಟನೆಕಾರರ ಮುತ್ತಿಗೆ

ಶುಕ್ರವಾರ, 9 ಸೆಪ್ಟಂಬರ್ 2016 (13:54 IST)
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಇಂದು ಮಾಜಿ ಸಚಿವ ಅಂಬರೀಶ್ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.
 
ಕಾವೇರಿ ವಿವಾದ ಕುರಿತಂತೆ ಯಾವುದೇ ಹೇಳಿಕೆ ನೀಡದ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅಂಬರೀಶ್ ಪುತ್ರ ಅಭಿಷೇಕ್‌ಗೆ ಘೇರಾವ್ ಹಾಕಿದರು.
 
ತಮ್ಮ ತಂದೆ ಅಮೆರಿಕೆಗೆ ತೆರಳಿದ್ದು, ಅವರು ಬಂದ ನಂತರ ಕಾವೇರಿ ವಿವಾದದ ಬಗ್ಗೆ ಮಾತನಾಡಲಿದ್ದಾರೆ. ನನಗೆ ಹೆಚ್ಚಿನ ಮಾಹಿತಿಯಿಲ್ಲವಾದ್ದರಿಂದ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
 
ಕಾವೇರಿ ವಿವಾದ ರಾಜ್ಯಾದ್ಯಂತ ಭುಗಿಲೆದ್ದಿದ್ದರೂ ಮಾಜಿ ಸಚಿವ ಅಂಬರೀಶ್ ಇಲ್ಲಿಯವರೆಗೆ ಒಂದೇ ಒಂದು ಹೇಳಿಕೆ ನೀಡಿಲ್ಲ ಎನ್ನುವುದೇ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
 
ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೆಳನಕ್ಕೆ ತೆರಳಿದ್ದ ನಟ ಪ್ರೇಮ ಮತ್ತು ನಟಿ ರಾಗಿಣಿ ವಿಡಿಯೋ ಮೂಲಕ ಸಂದೇಶವನ್ನು ರವಾನಿಸಿ ಕಾವೇರಿ ನಮ್ಮದು ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎನ್ನುವ ಸಂದೇಶ ರವಾನಿಸಿದ್ದರು.ಆದರೆ, ಅಂಬರೀಶ್ ಮಾತ್ರ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲದಿರುವುದು ಪ್ರತಿಭಟನಾಕಾರರ ಕೋಪಕ್ಕೆ ಕಾರಣವಾಗಿದೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ