ಮಾರ್ಚ್ 12ರಿಂದ 27ರ ವರೆಗೆ ನಡೆಯಲಿದೆ ಪಿಯುಸು ಪರೀಕ್ಷೆ

ಗುರುವಾರ, 5 ಮಾರ್ಚ್ 2015 (16:59 IST)
ಮಾರ್ಚ್ 12ರಿಂದ 27ರ ವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಇಲಾಖೆಯು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಷಮಾ ಗೋಡಬಲೆ ತಿಳಿಸಿದ್ದಾರೆ. 
 
ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕಿ ಗೋಡಹಲೆ, 1017 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಮೇಲ್ವಿಚಾರಣೆಗಾಗಿ 5546 ಮಂದಿ ಶಿಕ್ಷಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯು ಮಾರ್ಚ್ 12ರಿಂದ 27ರ ನಡುವೆ ನಡೆದು ಮುಕ್ತಾಯವಾಗಲಿದೆ ಎಂದರು. 
 
ಬಳಿಕ, ರಾಜ್ಯಾದ್ಯಂತ ಒಟ್ಟು 6,10,979 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದು, ಅವರಲ್ಲಿ 3,10,775 ಮಂದಿ ವಿದ್ಯಾರ್ಥಿಗಳು  3,00,224 ಮಂದಿ ವಿದ್ಯಾರ್ಥಿನಿಯರಿದ್ದಾರೆ.

ವೆಬ್ದುನಿಯಾವನ್ನು ಓದಿ