ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಗುರುವಾರ, 8 ಮೇ 2014 (09:21 IST)
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು  ರಾಜ್ಯಾದ್ಯಂತ ಒಟ್ಟಾರೆ 68.75% ರಷ್ಟು ಫಲಿತಾಂಶ ದಾಖಲಾಗಿದೆ. ಪ್ರತಿವರ್ಷದಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಭಾಗದವರೇ ಹೆಚ್ಚಿನ ಪ್ರಗತಿಯನ್ನು ದಾಖಲಿಸಿದ್ದಾರೆ. 9 ಗಂಟೆಯಿಂದ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನಾಳೆ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
 
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಪಿಯು ಬೋರ್ಡ್‌ನಲ್ಲಿ, ಸುದ್ದಿಗೋಷ್ಠಿಯನ್ನು ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಇಂದು ಬೆಳಿಗ್ಗೆ ಫಲಿತಾಂಶವನ್ನು ಪ್ರಕಟಿಸಿದ್ದಾರೆ. 
 
ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದು  86.4% ಫಲಿತಾಂಶ ದಾಖಲಾಗಿದೆ. ಬೀದರ್ ಕೊನೆಯ ಸ್ಥಾನದಲ್ಲಿದ್ದು 44.95 ಪ್ರತಿಶತ ವಿದ್ಯಾರ್ಥಿಗಳು ಪಾಸಾಗಿದ್ದಾರೆ. 
 
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,13, 705 ವಿದ್ಯಾರ್ಥಿಗಳಲ್ಲಿ, 3,72,116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗಿಂತ ಫಲಿತಾಂಶದಲ್ಲಿ 10% ರಷ್ಟು ಏರಿಕೆಯಾಗಿದೆ.  
 
ಪ್ರತಿವರ್ಷದಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 1,99,560 ವಿದ್ಯಾರ್ಥಿನಿಯರು (66.81%) ಪಾಸಾಗಿದ್ದರೆ. 1,71,556 ಬಾಲಕರು (54.46%) ಗೆಲುವನ್ನು ಸಾಧಿಸಿದ್ದಾರೆ. 
 
ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದು( 86.4%), ನಂತರದ ಸ್ಥಾನಗಳನ್ನು ಕ್ರಮವಾಗಿ ಉಡುಪಿ (85.57%), ಕೊಡಗು( 75.87%), ಉತ್ತರಕನ್ನಡ( 72.36%), ಚಿಕ್ಕಮಗಳೂರು( 69.%29) ಗಳು ಪಡೆದುಕೊಂಡಿವೆ.
 
45 ಕಾಲೇಜುಗಳು ಶೂನ್ಯ ಫಲಿತಾಂಶವನ್ನು ದಾಖಲಿಸಿವೆ.

ವೆಬ್ದುನಿಯಾವನ್ನು ಓದಿ