ರಮ್ಯಾ ಎಲ್‌ಇಡಿ ಬಲ್ಬ್ ರಾಯಭಾರಿಯಾಗಿ ನೇಮಕಕ್ಕೆ ಆಕ್ಷೇಪ

ಸೋಮವಾರ, 23 ನವೆಂಬರ್ 2015 (17:22 IST)
ರಾಜ್ಯದ ಮನೆಗಳಿಗೆ ಎಲ್‌ಇಡಿ ಬಲ್ಬ್ ವಿತರಣೆ ಯೋಜನೆಯಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಿದ್ದು ವಿವಾದಕ್ಕೆ ಎಡೆ ಕಲ್ಪಿಸಿದೆ.  ರಾಜಕೀಯ ವ್ಯಕ್ತಿಯನ್ನು ರಾಯಭಾರಿಯಾಗಿ ಮಾಡಿ ಅವರಿಗೆ ಪ್ರಚಾರಕ್ಕೆ ಹಣ ಖರ್ಚು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಎದುರಾಗಿವೆ.  ಇಂಧನ ಸಚಿವ ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಯಭಾರಿಗಳ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಕಾರ್ಯಕ್ರಮದಲ್ಲಿ ನಟ ಪುನೀತ್ ​ರಾಜ್​ಕುಮಾರ್, ನಟಿ ರಮ್ಯಾ ಉಪಸ್ಥಿತರಿದ್ದರು.

 ಕಡಿಮೆ ಕರೆಂಟಿನಲ್ಲಿ ಬೆಳಗುವ ಮೂಲಕ ವಿದ್ಯುತ್ ಉಳಿತಾಯ ಮಾಡುವ ಎಲ್‌ಇಡಿ ಬಲ್ಬ್‌ಗಳನ್ನು ಮನೆಗಳಿಗೆ ವಿತರಿಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಖಾಸಗಿ ಕಂಪನಿ ಪರವಾಗಿ ರಮ್ಯಾ ಅವರನ್ನು ಪ್ರಚಾರಕ್ಕೆ ತೊಡಗಿಸುವ ಮೂಲಕ ಕಾಂಗ್ರೆಸ್ ಲಾಭ ಮಾಡಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.ಸರ್ಕಾರದ ಯೋಜನೆಗೆ ರಾಜಕೀಯೇತರ ರಾಯಭಾರಿಗಳು ಸಿಗಲ್ವಾ ಎಂದೂ ಕೇಳಲಾಗುತ್ತಿದೆ.    ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಬಾಲಿವುಡ್‌ನ ಅಮಿತಾಬ್‌ಬಚ್ಚನ್, ಹೇಮಮಾಲಿನಿ ಮುಂತಾದ ಖ್ಯಾತ ನಟ, ನಟಿಯರನ್ನು ರಾಯಭಾರಿಗಳಾಗಿ ನೇಮಿಸಲಾಗುತ್ತದೆ.

ಆದ್ದರಿಂದ ಕನ್ನಡ ಚಿತ್ರನಟ, ನಟಿಯರು ಜನರ ಕಣ್ಮಣಿಗಳಾಗಿದ್ದರಿಂದ ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಸಲು ನಿರ್ಧರಿಸಿದ್ದಾಗಿ ಶಿವಕುಮಾರ್ ರಮ್ಯಾ ಆಯ್ಕೆಯನ್ನು ಸಮರ್ಥಿಸಿಕೊಂಡರು. 

ವೆಬ್ದುನಿಯಾವನ್ನು ಓದಿ