ಪ್ರಶ್ನೆ ಪತ್ರಿಕೆ ಸೋರಿಕೆ: ಮಾಜಿ ಸಚಿವ ರೇಣಾಕಾಚಾರ್ಯಗೆ ಕ್ಲೀನ್ ಚಿಟ್ ನೀಡಿದ ಸಿಐಡಿ

ಮಂಗಳವಾರ, 23 ಆಗಸ್ಟ್ 2016 (17:47 IST)
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಶಿವಕುಮಾರಯ್ಯಾ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಸಂಬಂಧವಿಲ್ಲ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
ಪ್ರಕರಣದ ಆರೋಪಿ ಶಿವಕುಮಾರಯ್ಯನೊಂದಿಗೆ ಮಾಜಿ ಸಚಿವ ರೇಣುಕಾಚಾರ್ಯ ಅವರ ಜೊತೆ ಪೋನ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಆರೋಪ ಮಾಡಲಾಗಿತ್ತು. 
 
ಆದರೆ, ಪ್ರಕರಣದಲ್ಲಿ ಸಂಪರ್ಕದಲ್ಲಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಲ್ಲ ಬದಲಾಗಿ ಬನಶಂಕರಿಯ ಎಸ್‌.ಸಿ.ರೇಣುಕಾಚಾರ್ಯ ಎನ್ನುವವರು ಆರೋಪಿ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದರು. ಇವರ ಮೊಬೈಲ್ ಸಂಖ್ಯೆಯಲ್ಲಿ ಕೇವಲ ಎರಡು ಸಂಖ್ಯೆಗಳಲ್ಲಿ ವ್ಯತ್ಯಾಸವಿದ್ದವು. ಹಾಗೂ ಒಂದೇ ಹೆಸರಿನಿಂದಾಗಿ ಗೊಂದಲ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಶಿವಕುಮಾರ್ ಯಾರ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಪರಿಶೀಲನೆ ನಡೆಸಿದಾಗ ರೇಣುಕಾಚಾರ್ಯ ಹೆಸರಿನ ನಂಬರ್ ಕಾಲ್ ಡೀಟೆಲ್ಸ್‌ನಲ್ಲಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವರನ್ನು ವಿಚಾರಣೆ ನಡೆಸಿದ್ದರು.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ