ಲೋಕಸಭೆಯಲ್ಲಿ ರೆಡ್ಡಿ ವಿವಾಹ ಕೋಲಾಹಲ: ವಿಪಕ್ಷಗಳಿಂದ ಮೋದಿಗೆ ತರಾಟೆ

ಗುರುವಾರ, 17 ನವೆಂಬರ್ 2016 (11:35 IST)
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪವಾಗಿದ್ದು, ಪ್ರತಿಪಕ್ಷ ಸದಸ್ಯರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
 
500 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಮಾಜಿ ಸಚಿವ ರೆಡ್ಡಿ ಪುತ್ರಿಯ ವಿವಾಹಕ್ಕೆ ಬಿಜೆಪಿ ನಾಯಕರು ಹೋಗಿದ್ದಾರೆ. ಬಿಜೆಪಿ ನಾಯಕರ ನಡೆಯನ್ನು ಯಾರು ಪ್ರಶ್ನಿಸಿಬಾರದೆ? ಜನಸಾಮಾನ್ಯರಿಗೊಂದು ಬಿಜೆಪಿ ನ್ಯಾಯಕರಿಗೊಂದು ಕಾನೂನಿದ್ಯಾ ಎಂದು ಪ್ರತಿಪಕ್ಷ ಸದಸ್ಯರು ಪ್ರಶ್ನಿಸಿದ್ದಾರೆ.
 
ನೋಟ್ ಬ್ಯಾನ್ ಮಾಡಿದ ಪ್ರಧಾನಿ ಮೋದಿ ಎಲ್ಲಿ ಓಡಿ ಹೋಗಿದ್ದಾರೆ? ನಮ್ಮ ಎಲ್ಲಾ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕಾಗಿದೆ. ಅವರು ಸದನದಲ್ಲಿ ಹಾಜರಿರುವಂತೆ ಸಭಾಪತಿಯವರು ಆದೇಶ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
 
ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಕೇಂದ್ರ ಸರಕಾರ, ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದ ಎಂದು ಘೋಷಿಸಿದೆ.
 
ಕರ್ನಾಟಕದಲ್ಲಿ ಅದ್ಧೂರಿ ವಿವಾಹಗಳಿಗೆ ಏಕೆ ಕಡಿವಾಣ ಇಲ್ಲ? ಜನಾರ್ದನ ರೆಡ್ಡಿ ಲೂಟಿ ಹೊಡೆದ 500 ಕೋಟಿಯಲ್ಲಿ ಪುತ್ರಿಯ ವಿವಾಹ ಮಾಡಿದ್ದಾರೆ ಎಂದು ಪ್ರತಿಪಕ್ಷ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
 
ಅಕ್ರಮ ಗಣಿ ಆರೋಪ ಎದುರಿಸಿ ಜೈಲುಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹ ನಿನ್ನೆ ಬೆಂಗಳೂರಿನ ಅರಮನೆಯಲ್ಲಿ ನಡೆಯಿತು. ಈ ಅದ್ಧೂರಿ ವಿವಾಹಕ್ಕೆ ರೆಡ್ಡಿ 500 ಕೋಟಿ ರೂಪಾಯಿ ಖರ್ಚು ಮಾಡಿರುವುದ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ