ಹಳಿ ಇಲ್ಲದೇ ಸುರೇಶ್ ಪ್ರಭು ರೈಲು ಬಿಟ್ಟಿದ್ದಾರೆ: ಸಿದ್ದರಾಮಯ್ಯ ಟೀಕೆ

ಗುರುವಾರ, 26 ಫೆಬ್ರವರಿ 2015 (16:37 IST)
ಕರ್ನಾಟಕದ ಮಟ್ಟಿಗೆ ಇದು ನಿರಾಶಾದಾಯಕ ರೈಲ್ವೆ ಬಜೆಟ್. ಸುರೇಶ್ ಪ್ರಭು ಅವರು ಹಳಿ ಇಲ್ಲದೇ ರೈಲು ಬಿಟ್ಟಿದ್ದಾರೆ. ದೇಶದ ಯಾವ ಭಾಗಕ್ಕೂ ಹೊಸ ಯೋಜನೆ ಘೋಷಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಇಂದು ಮಂಡಿಸಿದ ರೈಲ್ವೆ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.

ಕಚ್ಚಾ ತೈಲ ದರ ಇಳಿಕೆಯಿಂದ ಸರ್ಕಾರಕ್ಕೆ 18-20 ಸಾವಿರ ಕೋಟಿ ರೂ.ನಷ್ಟು ಹಣ ಉಳಿತಾಯವಾಗುತ್ತದೆ. ಈ ಹಣವನ್ನು ರೈಲ್ವೆ ಬಜೆಟ್‌ನಲ್ಲಿ ಬಳಸಿಕೊಳ್ಳಬಹುದಿತ್ತು .  ರೈಲ್ವೆ ಸಚಿವ ಸುರೇಶ್ ಪ್ರಭು ಈ ಬಗ್ಗೆ ಪ್ರಯತ್ನ ಮಾಡಿಲ್ಲ. ರೇಲ್ವೆಯನ್ನು ಖಾಸಗೀಕರಣ ಮಾಡುವ ಬಗ್ಗೆಯೂ ಅವರಿಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದರು. 
 
 ಗದಗ-ವಾಡಿ ಮಾರ್ಗದಲ್ಲಿ ಹೊಸ ರೈಲಿಗೆ ಬೇಡಿಕೆ ಇಟ್ಟಿದ್ದೆವು. ಆದರೆ ಈ ಬೇಡಿಕೆಗೆ ಮನ್ನಣೆ ಕೊಟ್ಟಿಲ್ಲ. ಮೈಸೂರು-ಬಳ್ಳಾರಿ ಹೈಸ್ಪೀಡ್ ರೈಲನ್ನೂ ರಾಜ್ಯಕ್ಕೆ ಕೊಟ್ಟಿಲ್ಲ. ಸುರೇಶ್ ಪ್ರಭು ಅವರು ಹಳಿ ಇಲ್ಲದೇ ರೈಲು ಬಿಟ್ಟಿದ್ದಾರೆ. ಸಚಿವರು ಏನು ಮಾಡುತ್ತಾರೆ ಎಂದು ಕಾದುನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ