ರೇಲ್ವೇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಒಂದು ಪ್ರಶ್ನೆಪತ್ರಿಕೆಗೆ 5 ಲಕ್ಷ ಡಿಮಾಂಡ್

ಮಂಗಳವಾರ, 1 ಜುಲೈ 2014 (11:06 IST)
ರೇಲ್ವೇ ಎಂಜಿನ್ ಚಾರಕ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ 13 ಜನ ಅಧಿಕಾರಿಗಳನ್ನು ಬಂಧಿಸಿದ್ದು, ಒಂದು ಪ್ರಶ್ನೆಪತ್ರಿಕೆಗೆ ಬರೊಬ್ಬರಿ 5 ಲಕ್ಷ ರೂಪಾಯಿಗಳ ಡಿಮಾಂಡ್ ಮೇಲೆ ಅಕ್ರಮ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ಧ ಕ್ರಿಮಿನಲ್ ಮತ್ತು ವಂಚನೆಯ ಆರೋಪಡದಿ ಪ್ರಕರಣ ದಾಖಲಾಗಿದೆ. 
 
ವಿಭಾಗೀಯ ವಯಕ್ತಿಕ ವಿಭಾಗಾಧಿಕಾರಿ, ದಕ್ಷಿಣ ಪಶ್ಚಿಮ ರೈಲ್ವೆ ಜಾಗರೂಕತೆ ಅಧಿಕಾರಿಗಳು ಮತ್ತು ವಕೀಲರು ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ. 
 
ಅಧಿಕೃತ ಮಾಹಿತಿ ಪಡೆದ ನಂತರ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, 15 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
 
ಒಂದು ಪ್ರಶ್ನೆಪತ್ರಿಕೆಗೆ 5 ಲಕ್ಷದಂತೆ ಬೇಡಿಕೆಯನ್ನಿಡಲಾಗಿತ್ತು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ