ರಾಜಸ್ತಾನ ಸಚಿವರಿಗೆ ಅನಾಮಧೇಯ ಮೇಲ್: ಸ್ಫೋಟದ ಬೆದರಿಕೆ

ಶುಕ್ರವಾರ, 26 ಡಿಸೆಂಬರ್ 2014 (14:43 IST)
ಇಲ್ಲಿನ ರಾಜ್ಯ ಸರ್ಕಾರದ ಹಾಲಿ ಸಚಿವರೋರ್ವರಿಗೆ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ಉಗ್ರರಿಂದ ಅನಾಮಧೇಯ ಇ-ಮೇಲ್ ಕರೆಯೊಂದು ಬಂದಿದ್ದು, ಗಣರಾಜ್ಯ ದಿನೋತ್ಸವವಾದ ಜನವರಿ 26 ರಂದು ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
 
ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯಿಸಿದ್ದು, ಈ ಮೇಲ್‌ನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕಾರ್ಯಾಕರ್ತರೇ ಕಳುಹಿಸಿದ್ದಾರೆ ಎಂದಿದ್ದು, ಈ ಬಗ್ಗೆ ಪೊಲೀಸರೂ ಕೂಡ ತನಿಖೆ ನಡೆಸಿ ಖಚಿತಪಡಿಸಿದ್ದಾರೆ. 
 
ಇತ್ತೀಚೆಗೆ ದೇಶದೆಲ್ಲೆಡೆ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಗಣರಾಜ್ಯೋತ್ಸವವನ್ನೇ ಗುರಿಯಾಗಿಸಿಕೊಂಡು ಈ ಬೆದರಿಕೆ ಹಾಕಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಲವು ಗಣ್ಯ ನಾಯಕರನ್ನು ಹತ್ಯೆಗೈಯ್ಯುವ ವ್ಯವಸ್ಥಿತ ಸಂಚು ಇದಾಗಿದೆ. ಈ ಕರೆಯ ಪ್ರಮುಖ ಉದ್ದೇಶ ಗಣರಾಜ್ಯೋತ್ವಕ್ಕೆ ವಿಶ್ವದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಗಮಿಸುತ್ತಿದ್ದು, ಒಬಾಮರನ್ನೇ ಹತ್ಯೆಗೈಯ್ಯುವ ಸಂಚನ್ನು ಉಗ್ರರು ರೂಪಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ