ರಾಜ್ಯದ ಹಲವೆಡೆ ತೀವ್ರ ಬರ ಪರಿಸ್ಥಿತಿ, ಶ್ರೀಕ್ಷೇತ್ರ ಧರ್ಮಸ್ಥಳದಿಂದ ಆರ್ಥಿಕ ನೆರವು

ಭಾನುವಾರ, 24 ಏಪ್ರಿಲ್ 2016 (13:26 IST)
ರಾಜ್ಯದ ಹಲವೆಡೆ ತೀವ್ರ ಬರ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ದರ್ಮಾಧಿಕಾರಿ ವಿರೇಂದ್ರ ಹೆಗಡೆ ಘೋಷಣೆ ಮಾಡಿದ್ದಾರೆ.  
ಶ್ರೀಕ್ಷೇತ್ರ ಧರ್ಮಸ್ಥಳದ ದರ್ಮಾಧಿಕಾರಿ ವಿರೇಂದ್ರ ಹೆಗಡೆ ನೆರವು ನೀಡಲು ಮುಂದೆ ಬಂದಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ನೀರು ಪೂರೈಕೆಗೆ 50 ಲಕ್ಷ ಹಾಗೂ ಜಾನುವಾರಗಳಿಗೆ ಮೇವು ಪೂರೈಕೆಗೆ 50 ಲಕ್ಷ ನೀಡಲಾಗುವುದು ಎಂದು ತಿಳಿಸಿದ್ದಾರೆ. 
 
ಈ ಬಾರಿ ಮುಂಗಾರು ಮಲೆ ಕೈಕೊಟ್ಟಿದ್ದು, ರಾಜ್ಯದ 26 ಜಿಲ್ಲೆಗಳ 114 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದರು. ಇನ್ನೂ ಅಗಸ್ಟ್‌ನಲ್ಲೂ ಮುಂಗಾರೂ ಕ್ಷೀಣಿಸಿದ್ದರಿಂದ 
 
ಭೀಕರ ಬರಗಾಲದಿಂದ ಉತ್ತರ ಕರ್ನಾಟಕದ ರೈತರು ಬೆಳೆದಿರುವ ಬೆಳೆಗಳನ್ನು ಕಾಪಾಡಲು ಕಷ್ಟವಾಗುತ್ತಿದ್ದು, ಮಳೆಯಿಲ್ಲದ ಕಾರಣ ಎಲ್ಲೆಲ್ಲೂ ನೀರಿನ ಸಮಸ್ಯೆ ಆಗಿದೆ. ಮತ್ತೊಂದೆಡೆ ಬರಗಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ