ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ, ವಾರ್ಡನ್ ಅಮಾನತು

ಗುರುವಾರ, 21 ಆಗಸ್ಟ್ 2014 (16:09 IST)
ಕಳೆದ ನಾಲ್ಕೈದು ವರ್ಷಗಳಿಂದ  ಬಿಜಾಪುರದ ಅಲಮೇಲ ಪಟ್ಟಣದ ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತಿ ಶಾಲೆಯ ಪ್ರಾಂಶುಪಾಲ ಸತ್ಯಪ್ಪ ಬಿದರಿ, ವಾರ್ಡನ್ ಶೋಭಾ ಹಿರೇಮಠ್ ಅವರನ್ನು ತಾತ್ಕಾಲಿಕ ಅಮಾನತು ಮಾಡಲಾಗಿದೆ.  ವಿಜಯಕುಮಾರ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಅಲಮೇಲ ಪಟ್ಟಣದಲ್ಲಿ  ವಿವಿಧ ಸಂಘಟನೆಗಳು ಬಂದ್ ಆಚರಿಸುತ್ತಿವೆ. ವಿದ್ಯಾರ್ಥಿನಿಯರು ಮಹಿಳಾ ಸಹಾಯವಾಣಿಗೆ ಪತ್ರ ಬರೆದ ಬಳಿಕ  ಈ ಘಟನೆ ಬೆಳಕಿಗೆ ಬಂದಿದೆ.

 ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ರಾಣಿ ಚೆನ್ನಮ್ಮ ವಬಿಜಾಪುರ ಜಿ.ಪಂ. ಸಿಇಒ ಶಿವಕುಮಾರ್  ಪ್ರಾಂಶುಪಾಲ ಮತ್ತು ವಾರ್ಡನ್  ಅವರ ಅಮಾನತಿಗೆ ಆದೇಶ ನೀಡಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದ ಮಕ್ಕಳನ್ನು ಶಾಲೆಗೆ ಸೇರಿಸಿದ್ದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ವಾಪಸು ಕರೆದುಕೊಂಡು ಹೋಗಿದ್ದಾರೆ.  

ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.  ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಚಿವ ಎಂ.ಬಿ. ಪಾಟೀಲ್ ಬೇಟಿ ನೀಡಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಪೋಷಕರು, ವಿದ್ಯಾರ್ಥಿನಿಯರ ಜೊತೆ ಕೂಡ ಸಚಿವರು ಮಾತುಕತೆ ನಡೆಸಿದರು. 

ವೆಬ್ದುನಿಯಾವನ್ನು ಓದಿ