ಕೋರ್ಟ್`ನ 4ನೇ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಅತ್ಯಾಚಾರ ಆರೋಪಿ

ಶನಿವಾರ, 18 ಫೆಬ್ರವರಿ 2017 (19:34 IST)
ಅತ್ಯಾಚಾರ ಆರೋಪಿಯೊಬ್ಬ ಕೋರ್ಟ್`ನ 4ನೇ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಘಟನೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಡೆದಿದೆ. ಈ ಸಂದರ್ಭ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ.


ಫೆಬ್ರವರಿ 9ರಂದು `ಬಾಗಲಕುಂಟೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪದಡಿ ವಿಕ್ಕಿ ಅಲಿಯಾಸ್ ನರಸಿಂಹಮೂರ್ತಿಯನ್ನ ಬಂಧಿಸಿ ಇವತ್ತು ಕೋರ್ಟ್`ಗೆ ಕರೆತರಲಾಗಿತ್ತು. ಈ ಸಂದರ್ಭ ಪರಾರಿಯಾಗುವ ಯತ್ನದಲ್ಲಿ ಆರೋಪಿ 4ನೇ ಮಹಡಿಯಿಂದ ಜಿಗಿದಿದ್ದಾನೆ. 

ವೆಬ್ದುನಿಯಾವನ್ನು ಓದಿ