ಅತ್ಯಾಚಾರವೆಸಗಿ ಮಹಿಳೆಯ ಮುಖ, ಗುಪ್ತಾಂಗಕ್ಕೆ ಫೆವಿಕ್ವಿಕ್ ಹಾಕಿದ ವಿಕೃತ ಕಾಮುಕ

ಮಂಗಳವಾರ, 22 ಜುಲೈ 2014 (16:27 IST)
ಕರ್ನಾಟಕದಲ್ಲಿ  ಅತ್ಯಾಚಾರ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿರುವ ನಡುವೆ ಕೂಡ್ಲಿಗಿ ತಾಲೂಕಿನಲ್ಲಿ ವಿಕೃತ ಕಾಮಿಯೊಬ್ಬನಿಂದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿಯಾಗಿದೆ. ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಬಾಲಾಜಿ ಲಾಡ್ಜ್‌ನಲ್ಲಿ ವಿಕೃತ ಕಾಮಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ನಂತರ ಅವಳ  ಮುಖ ಮತ್ತು ಗುಪ್ತಾಂಗಕ್ಕೆ ಫೆವಿಕ್ವಿಕ್ ಹಚ್ಚಿದ ಪೈಶಾಚಿಕ ಕೃತ್ಯ ಬಯಲಾಗಿದೆ.

 ಹನುಮಂತ ಎಂಬ ಹೆಸರಿನಲ್ಲಿ ರೂಂ ಪಡೆದಿದ್ದ ವ್ಯಕ್ತಿ ತಾನು ಕರೆತಂದಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ. ಬೆಳಿಗ್ಗೆ ರೂಂ ಖಾಲಿ ಮಾಡಿಕೊಂಡು ಹೋದ ಬಳಿಕ ರೂಂ ಬಾಯ್  ಬಾಗಿಲು ತೆರೆದು ನೋಡಿದಾಗ ಮಹಿಳೆ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿತ್ತು.  

ತನ್ನ ಅತ್ಯಾಚಾರ  ಬಯಲಾಗದೇ ಮುಚ್ಚಿಹಾಕುವುದಕ್ಕೆ ಮಹಿಳೆಯ ಮುಖ ಮತ್ತು ಗುಪ್ತಾಂಗಕ್ಕೆ ಫೆವಿಕ್ವಿಕ್ ಹಚ್ಚಿದ್ದಾನೆ. ಕೊಲೆಯಾದ ಮಹಿಳೆ ಅವನ ಪತ್ನಿಯೇ ಅಥವಾ ಬೇರೊಬ್ಬ ಮಹಿಳೆಯಿರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ