ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ

ಭಾನುವಾರ, 29 ಮಾರ್ಚ್ 2015 (18:22 IST)
ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ರಾಮನಗರ ಮಾಗಡಿಯ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಯುವತಿ ಸಂಜೆ ವೇಳೆ ಅಕ್ಕನ ಮನೆಗೆ ತೆರಳುತ್ತಿದ್ದಾಗ ಆಕೆಯನ್ನು ರಸ್ತೆ ಬದಿಗೆ ಎಳೆದೊಯ್ಡು ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರಿಗಳು ಇಬ್ಬರು ಆಟೋ ಚಾಲಕರಾಗಿದ್ದು, ಮಾಗಡಿ ಬಳಿ ಶ್ರೀಗಿರಿಪುರ ಗ್ರಾಮಕ್ಕೆ ಈ ಆಟೋಚಾಲಕರು ಸೇರಿದ್ದಾರೆ.  ಯುವತಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯುವಕರು ಅವಳನ್ನು ಹಿಡಿದು  ರಸ್ತೆ ಪಕ್ಷದ ನಿರ್ಜನ ಪ್ರದೇಶಕ್ಕೆ ಒಯ್ದು ಸಾಮೂಹಿಕ ಅತ್ಯಾಚಾರವೆಸಗಿದರೆಂದು ಗೊತ್ತಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ  ಓರ್ವ ಆರೋಪಿ ಶಂಕರ್ ಎಂಬವನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಈ ಕುರಿತು ಯುವತಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ