ಇವರ ರಾಕ್ಷಸೀ ವರ್ತನೆಯಿಂದ ಬೇಸತ್ತು ತನ್ನ ಗೆಳತಿಯೊಂದಿಗೆ ಗೋವಾಕ್ಕೆ ಪರಾರಿಯಾಗಿದ್ದಾಗಿ ಬಾಲಕಿ ಹೇಳಿದ್ದಳು. ನ.18ರಂದು ಮದರಸಾದಿಂದ ಪರಾರಿಯಾಗಿದ್ಬಾದ ಬಾಲಕಿಯರು ಗೋವಾಕ್ಕೆ ಹೋಗುವ ಸಂದರ್ಭದಲ್ಲಿ ಕೂಡ ಇಬ್ಬರು ಯುವಕರು ಅವರ ಫೊಟೋ ತೆಗೆದುಕೊಂಡು ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದರೆಂದು ಬಾಲಕಿಯರು ಭಟ್ಕಳ ನ್ಯಾಯಾಧೀಶರ ಎದುರು ಬಾಯಿಬಿಟ್ಟಿದ್ದಾರೆ. ಇವರ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನ.27ರಂದು ಗೋವಾದಲ್ಲಿ ಈ ಬಾಲಕಿಯರು ಪೊಲೀಸರಿಗೆ ಸಿಕ್ಕಿದ್ದರು. ಗೋವಾಗೆ ಹೋಗಲು ನೆರವು ನೀಡಿದ್ದ ಯುವಕನನ್ನು ಕೂಡ ಬಂಧಿಸಲಾಗಿದೆ.