ವೇಶ್ಯಾವಾಟಿಕೆ ಕಾನೂನುಬದ್ಧ ಮಾಡಿದ್ರೆ ರೇಪ್ ಕಡಿಮೆಯಾಗುತ್ತೆ: ನಿಸಾರ್ ಅಹ್ಮದ್

ಸೋಮವಾರ, 1 ಸೆಪ್ಟಂಬರ್ 2014 (16:33 IST)
ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದರೆ ಅತ್ಯಾಚಾರ ಪ್ರಮಾಣ ಕಡಿಮೆಯಾಗುತ್ತದೆ ಎಂದು ಖ್ಯಾತ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಛಾಯಾಚಿತ್ರಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದರು.

ನಾವು ಸಮಾಜದ ಅವಿಭಾಜ್ಯ ಭಾಗವಾಗಿರುವ ವೇಶ್ಯೆಯರನ್ನು ಅತ್ಯಂತ ನಿಕೃಷ್ಟವಾಗಿ ಶತಮಾನಗಳಿಂದ ಕಾಣುತ್ತಾ ಬಂದಿದ್ದೇವೆ. ಸ್ತ್ರೀ ಶೋಷಣೆಯ ಅತ್ಯಂತ ಕರಾಳಮುಖ ವೇಶ್ಯಾವಾಟಿಕೆ ಎಂದು ಅವರು ಹೇಳಿದರು. ಆ ಪಾಪಕೂಪದಿಂದ ಅವರನ್ನು ಹೊರಗೆ ತರವುದು ಸಾಧ್ಯವಾದರೂ ಸಮಾಜದಿಂದ ಒಂದು ರೀತಿಯ ಅವಲಕ್ಷಣಕ್ಕೆ ಒಳಗಾಗುತ್ತಾರೆ ಎಂದು ನಿಸಾರ್ ಅಹ್ಮದ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದೇ ಸರಿಯಾದ ಮಾರ್ಗ ಎಂದು ನಿಸಾರ್ ಹೇಳಿಕೆ ನೀಡಿದ್ದರು.  ಆದರೆ ನಿಸಾರ್  ಅಹ್ಮದ್ ಹೇಳಿಕೆ ಬಗ್ಗೆ ಸಂಪ್ರದಾಯವಾದಿಗಳು ಮೂಗುಮುರಿಯುವುದರಲ್ಲಿ ಸಂಶಯವಿಲ್ಲ. ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದರೆ ಪುರೋಹಿತಶಾಹಿ ವರ್ಗದ ಕೋಪಕ್ಕೆ ಗುರಿಯಾಗುವ ಸಾಧ್ಯತೆಯೂ ಇದೆ. 

ನಿಸಾರ್ ಅಹ್ಮದ್ ಹೇಳಿಕೆಗೆ ಆರೋಗ್ಯ ಸಚಿವ ಖಾದರ್ ಸ್ವಾಗತಿಸಿದ್ದಾರೆ. ಆದರೆ ಕಾನೂನಾತ್ಮಕವಾಗಿ ತರಲು ಸರ್ಕಾರಕ್ಕೆ ಕಷ್ಟವಾಗುತ್ತದೆ. ಆದರೆ ಈ ಕುರಿತು ಚರ್ಚೆಗಳು ನಡೆಯಬೇಕು ಎಂದೂ ನುಡಿದರು. 

ವೆಬ್ದುನಿಯಾವನ್ನು ಓದಿ