ನಿತ್ಯಾನಂದ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ: ಆಗಸ್ಟ್ 1ಕ್ಕೆ ಮುಂದೂಡಿಕೆ

ಶನಿವಾರ, 27 ಜೂನ್ 2015 (14:52 IST)
ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ ಬಿಡದಿ ಮಠದ ವಿವಾದಿತ ಪೀಠಾಧಿಪತಿ ಸ್ವಾಮಿ ನಿತ್ಯಾನಂದನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ಆಗಸ್ಟ್ 1ಕ್ಕೆ ಮುಂದೂಡಿದೆ. 
 
ಇಂದು ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ನಿತ್ಯಾನಂದ ತಮ್ಮ ಇತರೆ ಆರು ಮಂದಿ ಆರೋಪಿ ಶಿಷ್ಟರ ಜೊತೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ಆದರೆ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಲಯ ಪ್ರಕರಣವನ್ನು ಆಗಸ್ಟ್ 1ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿ ಮುಂದೂಡಿತು.  
 
ಇನ್ನು ಮಠದ ಭಕ್ತೆ ಆರತಿ ರಾವ್ ಎಂಬುವವರು ನಿತ್ಯಾನಂದ ಹಾಗೂ ಅವರ ಇತರೆ ಆರು ಮಂದಿ ಶಿಷ್ಯರ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. 
 
ಪ್ರಕರಣದಲ್ಲಿ ನಿತ್ಯಾನಂದ ಸೇರಿದಂತೆ ಅವರ ಶಿಷ್ಯಂದಿರಾದ ಶಿವವಲ್ಲಭನೇನಿ, ಧನಶೇಖರಂ, ಗೋಪಾಲ ಶೀಲಂ ರೆಡ್ಡಿ ಹಾಗೂ ಜಮನರಾಣಿ ಸೇರಿದಂತೆ ಇತರೆ ಇಬ್ಬರು ಶಿಷ್ಯರು ಆರೋಪಿಗಳಾಗಿದ್ದಾರೆ.  

ವೆಬ್ದುನಿಯಾವನ್ನು ಓದಿ