ಹೊಸಪೇಟೆ: ಅಪ್ರಾಪ್ತೆಯ ಮೇಲೆ ಸಂಬಂಧಿಕನಿಂದ ಅತ್ಯಾಚಾರ

ಶನಿವಾರ, 11 ಅಕ್ಟೋಬರ್ 2014 (12:08 IST)
15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸಂಬಂಧಿಕ ಯುವಕನೇ ಅತ್ಯಾಚಾರ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. 







ತಾಲ್ಲೂಕಿನ ಪಾಪನಾಯಕನಪಾಳ್ಯದಲ್ಲಿ ಈ ಕುಕೃತ್ಯ ನಡೆದಿದ್ದು, ಆರೋಪಿ ರಾಮು( 22) ವನ್ನು ಬಂಧಿಸಲಾಗಿದೆ. 
 
ಬಾಲಕಿಯ ಸಂಬಂಧಿಕನಾದ  ರಾಮು ಆಗಾಗ ಪೀಡಿತಳ ಮನೆಗೆ ಬಂದು ಹೋಗುತ್ತಿದ್ದ. ಹಾಗೆಯೇ ನಿನ್ನೆ ಸಹ ಬಾಲಕಿಯ ಮನೆಗೆ ತೆರಳಿದ್ದ ಆತ ಪಾಲಕರ ಅನುಪಸ್ಥಿತಿಯ ಲಾಭ ತೆಗೆದುಕೊಂಡು ಬಟ್ಟೆ ಕೊಡಿಸುವ ನೆಪ ಹೇಳಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಾತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಮನೆಗೆ ಹಿಂತಿರುಗಿ ಪಾಲಕರಿಗೆ ವಿಷಯ ತಿಳಿಸಿದ ಬಾಲಕಿ, ತಂದೆಯೊಡಗೂಡಿ ಗಾದಿಗನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ