ಬಿಬಿಎಂಪಿ ರಿಟ್ ಅರ್ಜಿಗಳ ಇತ್ಯರ್ಥ ಸಂಪೂರ್ಣ: ಹೈಕೋರ್ಟ್

ಸೋಮವಾರ, 27 ಏಪ್ರಿಲ್ 2015 (15:49 IST)
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎಲ್ಲಾ ರಿಟ್ ಅರ್ಜಿಗಳನ್ನು ಹೈಕೋರ್ಟ್ ಇಂದು ಇತ್ಯರ್ಥಗೊಳಿಸಿದೆ. 
 
ಮೂಲಗಳ ಪ್ರಕಾರ, ಬಿಬಿಎಂಪಿಯ ಮಾಜಿ ಸದಸ್ಯರಾಗಿದ್ದ ಬಿಜೆಪಿ ಪಕ್ಷದ ಕಾರ್ಪೊರೇಟರ್‌ಗಳು ಹಾಗೂ ಇತರರು ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿ ವಿಭಜನೆ ವಿಷಯ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಆರೋಪಿಸಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಪ್ರಸ್ತುತ ಈ ಎಲ್ಲಾ ಅರ್ಜಿಗಳೂ ಕೂಡ ಇತ್ಯರ್ಥವಾಗಿವೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ. 
 
ಇನ್ನು ಬಿಬಿಎಂಪಿ ಚುನಾವಣೆಯನ್ನು ತಡವಾಗಿ ನಡೆಸಲು ಹೈಕೋರ್ಟ್ ಏಕ ಸದಸ್ಯ ಪೀಠ ಅವಕಾಶ ನೀಡಿಲ್ಲ ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಈ ಹಿಂದೆ ಚುನಾವಣೆ ನಡೆಸಲು ಸರ್ಕಾರ 6 ತಿಂಗಳು ಅವಕಾಶ ನೀಡಿತ್ತು. ಬಳಿಕ ಇಂದಿುಗೆ ಎಲ್ಲಾ ರಿಟ್ ಅರ್ಜಿಗಳನ್ನು ಇತ್ಯರ್ಥಗೊಳಿಸಿದೆ. 
 
ಇನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಬಿಬಿಎಂಪಿ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ್ದು, ಸರ್ಕಾರ ಏಪ್ರಿಲ್ 13 ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅಭ್ಯರ್ಥಿಗಳ ಕ್ಯಾಟಗರಿ ಪಟ್ಟಿಯನ್ನು ಹಿಂಪಡೆದಿದ್ದೇವೆ ಎಂದಿದ್ದಾರೆ.  

ವೆಬ್ದುನಿಯಾವನ್ನು ಓದಿ