ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ವಿಸ್ತ್ರತ ವರದಿ ನೋಡಿ ಪರಾರಿಯಾಗುವ ಹಂತದಲ್ಲಿದ್ದ ಆರೋಪಿಯ ಜಾಡು ಹಿಡಿದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸೋಮವಾರ ರಾತ್ರಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಉಬರ್ ಕಾರ್ ಚಾಲಕನಾಗಿದ್ದು ಇತ್ತೀಚಿಗೆ ರೌಡಿಗಳೊಂದಿಗೆ ಗುರುತಿಸಿಕೊಂಡಿದ್ದ. ಯುವತಿಯ ಅಪಹರಣಕ್ಕೆ ಯತ್ನಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.