ಅಂತಾರಾಜ್ಯ ರೌಡಿ ಕಾಲಿಯಾ ರಫೀಕ್ ಕಗ್ಗೊಲೆ

ಬುಧವಾರ, 15 ಫೆಬ್ರವರಿ 2017 (12:13 IST)
ಮಂಗಳೂರು: ಕುಖ್ಯಾತ ಕ್ರಿಮಿನಲ್ ಉಪ್ಪಳದ ಕಾಲಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಕೊನೆಗೆ ಬರ್ಬರವಾಗಿ ಇರಿದು ಕೊಲೆ ಮಾಡದ ಘಟನೆ ಮಂಗಳವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ ನಡೆದಿದೆ.
ರಫುಕ್ ಸಂಚರಿಸುತ್ತಿದ್ದ ರಿಟ್ಜ್ ಕಾರಿಗೆ ಮುಂಭಾಗದಿಂದ ದಷ್ಕರ್ಮಿಗಳಯ ಮಿನಿ ಲಾರಿಯನ್ನು ಢಿಕ್ಕಿ ಹೊಡೆಸಿ, ಗುಂಡು ತೂರಾಟ ನಡೆಸಿದ್ದರು. ಬಳಿಕ  ಈತನನ್ನು ತಲವಾರಿನಿಂದ ಕಡಿದು ಕೊಲೆಗೈಯ್ದಿದ್ದಾರೆ. ಕಾರಿನಲ್ಲಿ 
 
ಜೊತೆಗಿದ್ದವನಿಗೆ  ಗಂಭೀರ ಗಾಯವಾಗಿದೆ. ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ರಫಿಕ್ ನ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
 
ದರೋಡೆ, ಕೊಲೆ, ಹಲ್ಲೆಯನ್ನೇ ಕಸುಬನ್ನಾಗಿಸಿಕೊಂಡಿದ್ದ ಕಾಲಿಯಾ ರಫಿಕ್ ಅಂತಾರಾಜ್ಯ ಮಟ್ಟದ ಕ್ರಿಮಿನಲ್ ಆಗಿದ್ದನು. ಉಪ್ಪಳವನ್ನೇ ತನ್ನ ಅಡ್ಡೆಯನ್ನಾಗಿಸಕೊಂಡು ಮೆರೆದಾಡುತ್ತಿದ್ದ. ಕೇರಳ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿವೆ.
 
ಹಲವಾರು ವರ್ಷಗಳಿಂದ ಈತ ಜೈಲಿನಲ್ಲಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು. ಮೂರು ದಿನಗಳ ಹಿಂದೆ ಉಪ್ಪಳದ ವೈದ್ಯರೊಬ್ಬರಿಗೆ ಹಫ್ತಾಕ್ಕಾಗಿ ಬೇಡಿಕೆಯನ್ನಿಟ್ಟಿದ್ದ ಎನ್ನಲಾಗಿದೆ. ಈತನ ವಿರೋಧಿಗಳಾದ ಉಪ್ಪಳದ ಕ್ರಿಮಿನಲ್ ಗಳ ಗುಂಪು ಕೊಲೆ ನಡೆಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ವೆಬ್ದುನಿಯಾವನ್ನು ಓದಿ