ವಿಚಾರಣೆ ವೇಳೆ ರೌಡಿಶೀಟರ್ ನಾಗ ಬಾಯ್ಬಿಟ್ಟ ಭಯಾನಕ ಸತ್ಯ

ಗುರುವಾರ, 25 ಮೇ 2017 (15:30 IST)
ಕಪ್ಪು ಹಣ ಚಲಾವಣೆ, ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ನಾಗ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಭಯಾನಕ ಸತ್ಯ ಬಾಯ್ಬಿಟ್ಟಿದ್ದಾನೆ.
 
ತಮಿಳುನಾಡಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿಯೊಬ್ಬರ ನೆರವಿನಿಂದ ಹಳೆ ನೋಟುಗಳನ್ನು  ಬದಲಾವಣೆ ಮಾಡುತ್ತಿದ್ದೆ. ಹಳೆ ನೋಟು ಬದಲಾವಣೆ ಸಂದರ್ಭದಲ್ಲಿ ಶೇ.20 ರಷ್ಟು ಕಮಿಶನ್ ಪಡೆಯುತ್ತಿರುವುದಾಗಿ ತಿಳಿಸಿದ್ದಾನೆ.
 
ಆದರೆ, ಜನೆವರಿ ನಂತರ ರಾಜಕಾರಣಿಗಳು, ಉದ್ಯಮಿಗಳು, ಕಪ್ಪು ಹಣ ಹೊಂದಿದವರ ಹಳೆಯ ನೋಟು ಬದಲಾವಣೆಗೆ ಶೇ.50 ರಷ್ಟು ಕಮಿಶನ್ ಪಡೆಯತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಕೆಲವು ಬಾರಿ ಹಳೆಯ ನೋಟು ಬದಲಾವಣೆ ಬಂದವರನ್ನು ದರೋಡೆ ಮಾಡಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
 
ಎನ್‌ಆರ್‌ಐಗಳಿಗೆ ಹಳೆಯ ನೋಟು ಬದಲಾವಣೆಗೆ ಇದ್ದ ಅವಕಾಶವನ್ನು ಬಳಸಿಕೊಂಡು ನಾಗ, ಆರ್‌ಬಿಐ ಅಧಿಕಾರಿಯ ಮೂಲಕ  ಹಳೆಯ ನೋಟುಗಳನ್ನು ಬದಲಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
 
ಒಟ್ಟು 50 ರಿಂದ 60 ಕೋಟಿ ರೂಪಾಯಿ ಸಂಗ್ರಹಿಸಿ ಗಾಂಧಿನಗರ ಕ್ಷೇತ್ರದಿಂದ ಶಾಸಕನಾಗಲೇಬೇಕು ಎನ್ನುವ ಮಹತ್‌ಕಾಂಕ್ಷೆಯನ್ನು ಹೊಂದಿದ್ದನು. ಅದಕ್ಕಾಗಿ ಸಿದ್ದತೆ ಕೂಡಾ ನಡೆಸಿದ್ದ ಎನ್ನಲಾಗಿದೆ. ಆತನ ಕೃತ್ಯಕ್ಕೆ ಇಬ್ಬರು ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಹಾಗೂ ಪತ್ನಿ ಲಕ್ಷ್ಮಿ ಕೂಡಾ ಸಾಥ್ ನೀಡಿದ್ದರು ಎಂದು ರೌಡಿಶೀಟರ್ ನಾಗ ತಿಳಿಸಿದ್ದಾನೆ, 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ