ಲೋಕಾಯುಕ್ತಕ್ಕೆ ಎಸ್.ಆರ್. ನಾಯಕ್ ಹೆಸರು ಶಿಫಾರಸ್ಸು: ಎಸ್.ಆರ್.ಹಿರೇಮಠ್ ಆಕ್ರೋಶ

ಶನಿವಾರ, 20 ಫೆಬ್ರವರಿ 2016 (15:59 IST)
ರಾಜ್ಯ ಸರಕಾರ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಹೆಸರು ಶಿಫಾರಸ್ಸು ಮಾಡಿರುವುದು ಸರಿಯಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ್ ಹೇಳಿದ್ದಾರೆ.
 
ಎಸ್‌.ಆರ್.ನಾಯಕ್ ವಿರುದ್ಧ ಅಕ್ರಮಗಳು ಎಸಗಿದ ಆರೋಪಗಳಿವೆ. ಅಂತಹ ವ್ಯಕ್ತಿಗೆ ಲೋಕಾಯುಕ್ತ ಹುದ್ದೆ ನೀಡುವುದು ಘೋರ ಅಪರಾಧ.ಇದನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಲೋಕಾಯುಕ್ತ ಹುದ್ದೆಗೆ ತನ್ನದೇ ಆದ ಘನತೆ ಗೌರವವಿದೆ. ಪ್ರಾಮಾಣಿಕ ಮತ್ತು ಸಜ್ಜನರಾದಂತಹ ವ್ಯಕ್ತಿಯನ್ನು ಲೋಕಾಯುಕ್ತರಾಗಿ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಹುದ್ದೆಯ ಘನತೆ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸ್ಸು ಮಾಡುವುದು ಸೂಕ್ತ ಎಂದು ಹಿರೇಮಠ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ