ಸೆಕ್ಸ್ ಚಾಟ್ ಮಾಡದಿದ್ರೆ ನಿರ್ಭಯ ಸ್ಟೈಲ್ ಗ್ಯಾಂಗ್‌ರೇಪ್ ಮಾಡ್ತೇವೆ: ವಿದ್ಯಾರ್ಥಿನಿಗೆ ಸಹಪಾಠಿಗಳ ಬೆದರಿಕೆ

ಶುಕ್ರವಾರ, 6 ಮಾರ್ಚ್ 2015 (15:04 IST)
ದೆಹಲಿಯ ನಿರ್ಭಯ ಗ್ಯಾಂಗ್‌ರೇಪ್ ಆರೋಪಿ ಮುಕೇಶ್ ಸಿಂಗ್‌ನಂತಹ ದುಷ್ಟ ವ್ಯಕ್ತಿಗಳು ಇಂದಿನ ಪೀಳಿಗೆಗೆ ಮಾದರಿಯಾಗುತ್ತಿದ್ದಾರೆ.

ನಗರದ ಶಾಲೆಯೊಂದರ ವಿದ್ಯಾರ್ಥಿಗಳು ಸೆಕ್ಸ್ ಚಾಟ್ ಮಾಡಲು ನಿರಾಕರಿಸಿದ ಸಹಪಾಠಿ ವಿದ್ಯಾರ್ಥಿನಿಯನ್ನು ನಿರ್ಭಯ ಸ್ಟೈಲ್‌ನಲ್ಲಿ ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ 10ನೇ ತರಗತಿಯ ವಿದ್ಯಾರ್ಥಿನಿಗೆ ಸಹಪಾಠಿ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಶಾಲೆಯ ಅಡಳಿತ ಮಂಡಳಿ ಮೌನವಾಗಿದೆ ಎಂದು ಆರೋಪಿಸಲಾಗಿದೆ.

ಏತನ್ಮಧ್ಯೆ, ಇದೀಗ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ಶಾಲಾ ಅಡಳಿತ ಮಂಡಳಿ ವಿರುದ್ಧ ತನಿಖೆಗೆ ಮುಂದಾಗಿದೆ. ಇದರಿಂದ ಆತಂಕಗೊಂಡ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿ, ಶಾಲೆಯ ಕೆಲ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ನಿರಂತರವಾಗಿ ಮಗಳಿಗೆ ಕಿರುಕುಳ ನೀಡಿದ್ದಾರೆ.  ನನ್ನ ಮಗಳು ಅವರೊಂದಿಗೆ ಸೆಕ್ಸ್ ಚಾಟ್ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ. ದೆಹಲಿಯ ನಿರ್ಭಯ ಗ್ಯಾಂಗ್‌ರೇಪ್‌ನಂತೆ ರೇಪ್ ಮಾಡುವುದಾಗಿ ಮಗಳಿಗೆ ವಿದ್ಯಾರ್ಥಿಗಳು ಬೆದರಿಕೆಯೊಡ್ಡಿದ್ದಾರೆ. ಮತ್ತೊಂದು ಆಘಾತಕಾರಿ ವಿಷಯವೆಂದರೆ ಶಾಲಾ ಅಡಳಿತ ಮಂಡಳಿ ನಮ್ಮ ದೂರನ್ನು ನಿರ್ಲಕ್ಷಿಸಿ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಬ್ಬರು ಶಿಕ್ಷಕರು ಮತ್ತು ಮತ್ತೊಬ್ಬ ಸಿಬ್ಬಂದಿಯ ವಿರುದ್ಧ ದೂರಿನಲ್ಲಿ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ