ಶಾಲಾ ಅಡಳಿತ ಮಂಡಳಿ ವೈಫಲ್ಯ: ಆತಂಕದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು

ಬುಧವಾರ, 30 ಮಾರ್ಚ್ 2016 (12:10 IST)
ಬೆಂಗಳೂರು: ಖಾಸಗಿ ಶಾಲೆಯ ಯಡ್ಡವಟ್ಟಿನಿಂದ 35 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ವಂಚಿತರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಸಾರಾಯಿ ಪಾಳ್ಯದಲ್ಲಿರುವ ವಿವೇಕಾನಂದ ಖಾಸಗಿ ಶಾಲೆಯ ಆಡಳಿತ ಮಂಡಳಿ, ಇದುವರೆಗೂ ಅಧಿಕೃತ ಮಾನ್ಯತೆ ಪಡೆಯದಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ರವಾನಿಸಲು ನಿರಾಕರಿಸಿದೆ. ಖಾಸಗಿ ಶಾಲೆಯ ಯಡ್ಡವಟ್ಟಿನಿಂದ 35 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. 
 
ಶಾಲೆಯ ಯಡ್ಡವಟ್ಟಿನಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಖಾಸಗಿ ಶಾಲೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ