ನಾಳೆ 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ

ಶನಿವಾರ, 20 ಫೆಬ್ರವರಿ 2016 (12:18 IST)
ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನದ 2ನೇ ಸುತ್ತಿನ ಕಾರ್ಯಕ್ರಮ ಫೆಬ್ರವರಿ 21 ರಂದು ನಡೆಯಲಿದೆ.


 
ಜನವರಿ 17ರಂದು ನಡೆದ ಮೊದಲ ಸುತ್ತಿನ ಅಭಿಯಾನದಲ್ಲಿ ರಾಜ್ಯದಾದ್ಯಂತ 74.26 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿತ್ತು. ಈ ಸುತ್ತಿನಲ್ಲಿ ಹೆಚ್ಚುವರಿ 1 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 
 
ಬೆಂಗಳೂರಿನ 2 ಸಾವಿರ ಬೂತ್‌ಗಳು ಸೇರಿದಂತೆ ರಾಜ್ಯದ 32,617 ಬೂತ್‌ಗಳಲ್ಲಿ 21ರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುವುದು. ಮುಂದಿನ ಮೂರು ದಿನಗಳ ಕಾಲ 22, 23 ಹಾಗೂ 24ರಂದು ಸ್ವಯಂ ಸೇವಕರು, ನರ್ಸ್‌ಗಳು ಮನೆಮನೆಗೆ ತೆರಳಿ ಪೋಲಿಯೊ ಹನಿ ಹಾಕಲಿದ್ದಾರೆ.

ವೆಬ್ದುನಿಯಾವನ್ನು ಓದಿ