ಕಲಾಪ ನಡೆಸುವುದು ದೇವರಿಗಿಂತ ದೊಡ್ಡ ಕೆಲಸ: ಕಾಗೋಡು ಗರಂ

ಶುಕ್ರವಾರ, 27 ಮಾರ್ಚ್ 2015 (12:12 IST)
ನಗರದ ವಿಧಾನಸೌಧದಲ್ಲಿ ಇಂದು ವಿಧಾನಸಭಾ ಕಲಾಪ ನಡೆಯುತ್ತಿದ್ದು, ಸದಸ್ಯರ ಹಾಜರಿ ಇಂದೂ ಕೂಡ ಕುಸಿತವಾಗಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಗರಂ ಆಗಿ ಸದನ ನಡೆಸುವುದು ದೇವರಿಗಿಂತ ದೊಡ್ಡ ಕೆಲಸವಾಗಿದ್ದು, ಸಂಜೆ 6 ಗಂಟೆವರೆಗೆ ಸದನವನ್ನು ನಡೆಸುತ್ತೇನೆ ಎಂದ ಏರು ಧ್ವನಿಯಲ್ಲಿ ತಿಳಿದರು.  
 
ಸದನ ಆರಂಭವಾಗಿತ್ತು. ಬಳಿಕ ಜೆಡಿಎಸ್ ಸದಸ್ಯ ವೈ.ಎಸ್.ವಿ ದತ್ತಾ ಅವರು ಭಾಷಣ ಮುಂದುವರಿಸಿದ್ದರು. ಈ ವೇಳೆ ಮಾತನಾಡಿದ ದತ್ತಾ ಇಂದೂ ಕೂಡ ಸಚಿವರು ಹಾಗೂ ಶಾಸಕರು ಗೈರು ಹಾಜರಾಗಿದ್ದಾರೆ ಎಂದರು. ಇದೇ ವೇಳೆ, ಪ್ರತಿಕ್ರಿಯಿಸಿದ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಮಾತನಾಡಿ ನಾಳೆ ಹಾಗೂ ನಾಡಿದ್ದು ಸದನದ ಕಲಾಪಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ ಹಲವರು ಇಂದೇ ಗೈರಾಗಿದ್ದಾರೆ. ಸಾಕಷ್ಟು ಮಂದಿ ಸದಸ್ಯರಿಲ್ಲ ಕಾರಣ ಕಲಾಪವನ್ನು ಸುಗಮವಾಗಿ ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಂದ 4 ವರೆಗೆ ಕಲಾಪ ನಡೆಸಿ ಎಂದು ಮನವಿ ಮಾಡಿದರು. 
 
ಈ ವೇಳೆ ಗರಂ ಆದ ಸಭಾಧ್ಯಕ್ಷರು, ಸದನದಲ್ಲಿ 400 ಮಂದಿ ಸಚಿವರಿದ್ದಾರೆ. ಭಾಷಣ ಮುಂದುವರಿಸಿ ಎಂದು ದತ್ತಾ ಅವರಿಗೆ ಸೂಚಿಸಿದರು. ಬಳಿಕ ಕಲಾಪ ನಡೆಸುವುದು ದೇವರಿಗಿಂತ ದೊಡ್ಡ ಕೆಲಸ. ಆದ್ದರಿಂದ ಇಂದು ಸಂಜೆ 6ರ ವರೆಗೆ ಕಲಾಪ ನಡೆಸಲಿದ್ದೇನೆ ಎಂದರು.  

ವೆಬ್ದುನಿಯಾವನ್ನು ಓದಿ