4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಷಕರ ಪ್ರತಿಭಟನೆ

ಬುಧವಾರ, 18 ನವೆಂಬರ್ 2015 (14:15 IST)
ನಾಲ್ಕು ವರ್ಷದ ಬಾಲಕಿ ಮೇಲೆ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಘಟನೆ ಕುರಿತು ಶಾಲೆಯ ಆಡಳಿತ ಮಂಡಳಿ ಸರಿಯಾಗಿ ಕ್ರಮ ಕೈಗೊಂಡಿಲ್ಲದಿರುವುದನ್ನು ಖಂಡಿಸಿ ಪೋಷಕರು ಇಂದು ಏಕಾಏಕಿ ಶಾಲೆಯಲ್ಲಿ ಎದುರು ಪ್ರತಿಭಟನೆ ನಡೆಸಿದರು. ಈ ಘಟನೆ ವರದಿಯಾದ ಬಳಿಕ ಆಡಳಿತ ಮಂಡಳಿ ಶಾಲೆಗೆ ನಾಲ್ಕು ದಿನಗಳ ರಜೆ ಘೋಷಿಸಿತ್ತು.  ಶಾಲೆಗೆ ರಜೆ ಘೋಷಿಸಿದ್ದನ್ನು ಪೋಷಕರು ಖಂಡಿಸಿ ಏಕಾಏಕಾ ಶಾಲೆಗೆ ನುಗ್ಗಿ ದಾಂಧಲೆ ನಡೆಸಿದರು ಮತ್ತು ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
 
ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಮಣಿಪುರ ಮೂಲದ ರೋಮಿಯೋ ಎಂದು ಗುರುತಿಸಲಾಗಿದೆ.  ಕಳೆದ ಎರಡು ವರ್ಷಗಳಿಂದ ಆತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.
 
ಸೋಮವಾರ ಮಧ್ಯಾಹ್ನ ಮಗು ಶಾಲೆಯಿಂದ ಮನೆಗೆ ಬಂದಾಗ ಆಕೆಯ ಮುಖ ಸಪ್ಪಗಾಗಿತ್ತು. ನೋವು ಎಂದು ಚೀರುತ್ತಿದ್ದಳು. ತಕ್ಷಣ ಪಾಲಕರು, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.
 
ಪೋಷಕರು ಕೊಟ್ಟ ದೂರನ್ನು ಆಧರಿಸಿ ಪೊಲೀಸರು ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆಸಿಕ್ಕ ದೃಶ್ಯದಿಂದ ದೈಹಿಕ ಶಿಕ್ಷಕ ರೋಮಿಯೋ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿತ್ತು.

ವೆಬ್ದುನಿಯಾವನ್ನು ಓದಿ